ಧಾರವಾಡ: ಗ್ರಾಹಕರಿಂದ ಹಣ ಪಡೆದು ಪ್ಲಾಟ್‌ನ ನೋಂದಾಯಿತ ಖರೀದಿ ಪ್ರಮಾಣಪತ್ರ ನೀಡಿದ ಹುಬ್ಬಳ್ಳಿಯ ರೇಹಾನ್ ಪಾರ್ಕ್ ಡೆವಲೆಪರ್‌ಗೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗವು ಒಂದು ತಿಂಗಳಲ್ಲಿ ಖರೀದಿ ಪತ್ರ ನೀಡಬೇಕು. ಇಲ್ಲವಾದಲ್ಲಿ 50 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ.
ಹುಬ್ಬಳ್ಳಿ ತಾಲೂಕಿನ ಯಲ್ಲಾಪೂರ ವಿ. ಗ್ರಾಮದ ರೇಹಾನ್ ಪಾರ್ಕ್ನಲ್ಲಿ 30x40 ವಿಸ್ತೀರ್ಣದ ಬಿನ್ ಶೇತಕಿ ಪ್ಲಾಟ್‌ನ್ನು 7 ಲಕ್ಷ 20 ಸಾವಿರ ರೂಪಾಯಿಗೆ ಖರೀದಿ ಕರಾರು ಮಾಡಿಕೊಂಡು ಅರ್ಧ ಹಣ ಭೂ ಮಾಲೀಕರಿಗೆ/ ಡೆವಲಪರ್‌ಗೆ ಕೊಟ್ಟಿದ್ದರೂ ಅವರು ತನಗೆ ನೋಂದಾಯಿತ ಖರೀದಿ ಪತ್ರ ಬರೆದುಕೊಡದೇ ಸತಾಯಿಸಿ, ಸೇವಾ ನ್ಯೂನ್ಯತೆ ಎಸಗಿದ್ದಾರೆ ಎಂದು ಧಾರವಾಡದ ಜೆ.ಟಿ.ಮುಳ್ಳೊಳ್ಳಿ ಎಂಬುವರು ಜಿಲ್ಲಾ ಗ್ರಾಹಕರ ಆಯೋಗಕ್ಕೆ ಪರಿಹಾರಕ್ಕಾಗಿ ಈ ದೂರನ್ನು ಸಲ್ಲಿಸಿದ್ದರು.
ಈ ದೂರಿನ ವಿಚಾರಣೆಯನ್ನು ನಡೆಸಿದ ಆಯೋಗ, ಪ್ರಸ್ತುತ ಪ್ರಕರಣದಲ್ಲಿ ರೇಹಾನ್ ಪಾರ್ಕಿನ ಮಾಲೀಕರು/ ಡೆವಲಪರ್ ನಿಗದಿತ ಅವಧಿಯಲ್ಲಿ ನೋಂದಾಯಿತ ಕ್ರಯಪತ್ರ ಮಾಡಿಕೊಡದೇ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಅಭಿಪ್ರಾಯಪಟ್ಟು, ಒಂದು ತಿಂಗಳೊಳಗೆ ನೋಂದಾಯಿತ ಕ್ರಯಪತ್ರ ಬರೆದುಕೊಡಬೇಕು. ತಪ್ಪಿದ್ದಲ್ಲಿ 50 ಸಾವಿರ ರೂಪಾಯಿ ಪರಿಹಾರ ಮತ್ತು 10 ಸಾವಿರ ರೂಪಾಯಿ ಪ್ರಕರಣ ನಡೆಸಿದ ಖರ್ಚು ನೀಡುವಂತೆ ರೇಹಾನ್ ಪಾರ್ಕಿನ ಮಾಲೀಕರು ಮತ್ತು ಡೆವಲೆಪರ್‌ರವರಿಗೆ ಆಯೋಗ ಆದೇಶಿಸಿದೆ.
Kshetra Samachara
16/09/2022 08:51 pm