ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಳು ದೂರು ದಾಖಲಿಸಿದ ಪಿರ್ಯಾದಿ ಎಂಎಸ್‍ಎಸ್‌ಟಿ ಪಾಲುದಾರಿಕಾ ಸಂಸ್ಥೆಗೆ 50 ಸಾವಿರ ದಂಡ

ಧಾರವಾಡ: ಎಮ್‍ಎಸ್‍ಎಸ್‌ಟಿ ಎಂಟರಪ್ರೈಜಸ್ ಎಂಬ ಹೆಸರಿನ ಹುಬ್ಬಳ್ಳಿಯ ಪಾಲುದಾರಿಕೆ ಸಂಸ್ಥೆಯನ್ನು ರಾಮಚಂದ್ರ ಹೆಸರಿನ ವ್ಯಕ್ತಿ ಮತ್ತು ಅವರ ಸಹೋದರ ಮಂಜುನಾಥ ನಡೆಸುತ್ತಿದ್ದು ತಮ್ಮ ವ್ಯವಹಾರಕ್ಕಾಗಿ ಹುಬ್ಬಳ್ಳಿಯ ಇಂಡಿಯನ್ ಓವರಸೀಸ್ ಬ್ಯಾಂಕಿನಿಂದ ಸಾಲ ಮತ್ತು ಓಡಿ ಸೌಲಭ್ಯ ಪಡೆದಿದ್ದರು.

ಆದರೆ ಓವರಸೀಸ್ ಬ್ಯಾಂಕಿನವರು ರಾಮಚಂದ್ರ ಅವರ ಸಹೋದರ ಮಂಜುನಾಥನ ಜೊತೆ ಸೇರಿಕೊಂಡು ತಮ್ಮ ಪಾಲುದಾರಿಕಾ ಸಂಸ್ಥೆಗೆ 9,70,000 ಲುಕ್ಸಾನು ಮಾಡಿ ಸೇವಾ ನ್ಯೂನ್ಯತೆ ಎಸಗಿ ತಮಗೆ ಮೋಸ ಮಾಡಿ ನಷ್ಟ ಉಂಟು ಮಾಡಿದ್ದಾರೆಂದು ಪಿರ್ಯಾದಿ ರಾಮಚಂದ್ರ ಅವರು ಧಾರವಾಡ ಗ್ರಾಹಕರ ಆಯೋಗಕ್ಕೆ ದೂರು ದಾಖಲಿಸಿದ್ದರು.

ಈ ದೂರಿನ ಕೂಲಂಕುಷ ವಿಚಾರಣೆ ನಡೆಸಿದ ಆಯೋಗ, ಪಾಲುದಾರ ಸಹೋದರರಿಬ್ಬರೂ ಇಂಡಿಯನ್ ಓವರಸೀಸ್ ಬ್ಯಾಂಕಿಗೆ ಮೋಸ ಮಾಡುವ ದುರುದ್ದೇಶದಿಂದ ಈ ರೀತಿ ಸುಳ್ಳು ದೂರನ್ನು ದಾಖಲಿಸಿರುವುದು ಕಂಡು ಬರುತ್ತದೆ ಅಂತಾ ಆಯೋಗ ಅಭಿಪ್ರಾಯಪಟ್ಟು, ದೂರು ದಾಖಲಿಸಿದ ಪಿರ್ಯಾದಿ ಪಾಲುದಾರಿಕಾ ಸಂಸ್ಥೆಗೆ 50,000 ದಂಡವನ್ನು ಇಂಡಿಯನ್ ಓವರಸೀಸ್ ಬ್ಯಾಂಕಿನ ಹುಬ್ಬಳ್ಳಿ ಶಾಖೆಗೆ ಖರ್ಚಿನ ಪರಿಹಾರವಾಗಿ ನೀಡುವಂತೆ ಆದೇಶಿಸಿ, ಅವರ ದೂರನ್ನು ವಜಾ ಮಾಡಿ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿ.ಅ. ಬೋಳಶೆಟ್ಟಿ ಮತ್ತು ಪಿ.ಸಿ.ಹಿರೇಮಠ ತೀರ್ಪು ನೀಡಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

23/08/2022 08:56 pm

Cinque Terre

13.28 K

Cinque Terre

0

ಸಂಬಂಧಿತ ಸುದ್ದಿ