ಹುಬ್ಬಳ್ಳಿ : ವಾಹನ ಸವಾರರೇ ನೀವು ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದೀರಾ? ಮನೆಗೆ ನೋಟಿಸ್ ಬಂದಿದೀಯೇ? ದಂಡ ಹೇಗೆ ತುಂಬಬೇಕು ಎಂಬ ಯೋಚನೆದಲ್ಲಿದ್ದೀರಾ? ಭಯ ಬೇಡ ಇದೀಗ ಹು-ಧಾ ಪೊಲೀಸ್ ಕಮಿಷನ್‌ರೇಟ್ ಹೊಸ ವ್ಯವಸ್ಥೆ ಜಾರಿಗೆ ತಂದಿದ್ದಾರೆ. ಈ ಮೂಲಕ ತಮ್ಮ ಮೊಬೈಲ್ ಮೂಲಕವೇ ದಂಡ ತುಂಬಬಹುದು.
ಸದ್ಯ ವಾಹನ ಸವಾರರು ರಸ್ತೆಗೆ ಇಳಿದಾಗ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ರೆ ಮನೆಗೆ ನೋಟಿಸ್ ಬರುತ್ತದೆ. ಮತ್ತೆ ಬಂದು ದಂಡ ತುಂಬಲು ಪೊಲೀಸ್ ಠಾಣೆ ಇಲ್ಲವೆ ಟಿಎಂಸಿ ಕೇಂದ್ರಕ್ಕೆ ಹೋಗಬೇಕಾಗಿತ್ತು. ಆದರೆ ಇದೀಗ ದಂಡ ತುಂಬಲು ಪೊಲೀಸ್ ಇಲಾಖೆ ಮತ್ತಷ್ಟು ಸರಳ ಮಾಡಿದೆ. ವಾಹನ ಸವಾರರು ಕರ್ನಾಟಕ ಒನ್ ವೆಬ್ ಪೋರ್ಟಲ್ ಇಲ್ಲವೇ, ಹತ್ತಿರದ ಕರ್ನಾಟಕ ಒನ್ ಕೇಂದ್ರಗಳಿಗೆ ತೆರಳಿ ಪಾವತಿಸಬಹುದಾಗಿದೆ. ಈ ಸೌಲಭ್ಯವನ್ನು ಇಲಾಖೆ ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಕಾರ್ಯ ರೂಪಕ್ಕೆ ತಂದಿದೆ.
ಇನ್ನು ಸಿಗ್ನಲ್ ಇತರೆಡೆ ವಾಹನಗಳ ನೋಂದಣಿ ಸಂಖ್ಯೆಯನ್ನು ಯಂತ್ರಗಳಲ್ಲಿ ಪರಿಶೀಲಿಸಿ ದಂಡ ಪಾವತಿಗೆ ಸೂಚನೆ ನೀಡುತ್ತಿದ್ದಾರೆ. ಆದರೆ ಸವಾರರು ಕಿಸೆಯಲ್ಲಿ ದುಡ್ಡಿಲ್ಲ ಆನ್‌ಲೈನ್ ಮೂಲಕ ಪಾವತಿಸುತ್ತೇವೆ ಎಂದು ಯುಪಿಐ ಕೋಡ್ ಬೇಡಿಕೆ ಇಡುತ್ತಿದ್ದಾರೆ. ಆದರೆ ಈ ವ್ಯವಸ್ಥೆಯನ್ನು ಸಂಚಾರ ಪೊಲೀಸರು ಹೊಂದಿಲ್ಲ . ಈ ಕೊರತೆ ನೀಗಿಸುವ ನಿಟ್ಟಿನಲ್ಲಿ ಕರ್ನಾಟಕ ಒನ್ ನೆರವು ಪಡೆದಿದ್ದು, ಇನ್ನು ಮುಂದೆ ದಂಡ ಪಾವತಿಸಲು ಪೊಲೀಸ್ ಠಾಣೆ , ಟಿಎಂಸಿ ಕೇಂದ್ರ ಸಿಗ್ನಲ್ ಗಳಲ್ಲಿರುವ ಪೊಲೀಸರನ್ನು ಹುಡುಕಿಕೊಂಡು ಹೋಗುವ ಅಗತ್ಯವಿಲ್ಲದಾಗಿದೆ...
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/08/2022 01:27 pm