ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ದೇಶಸೇವೆಗೈದು ಬಂದ ಯೋಧನಿಗೆ ಅದ್ಧೂರಿ ಸ್ವಾಗತ

ಧಾರವಾಡ: 24 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಉನ್ನತ ಮಟ್ಟದ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಸೇವೆಯಿಂದ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಹಿಂದಿರುಗಿದ ಧಾರವಾಡ ಕೆಲಗೇರಿ ಗ್ರಾಮದ ಯೋಧನಿಗೆ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತ ಕೋರಿದರು.

ಗಂಗಾಧರ ಹಲಸಂಗಿ ಎಂಬ ಯೋಧನೇ ಸೇವಾ ನಿವೃತ್ತಿ ಹೊಂದಿ ಇದೀಗ ಮರಳಿ ಸ್ವಗ್ರಾಮಕ್ಕೆ ಬಂದವರು. ಇವರ ತಂದೆ, ತಾಯಿ ಕೃಷಿಕರಾಗಿದ್ದು, ತಮ್ಮ ಕಷ್ಟದ ದಿನಗಳಲ್ಲೂ ಮಗನಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿದ ಪೋಷಕರು ಆತ ಸೈನ್ಯಕ್ಕೆ ಸೇರುವಂತೆ ಮಾಡಿದರು. ಇದೀಗ ಗಂಗಾಧರ ಅವರು ಸೇನೆಯಲ್ಲಿ 24 ವರ್ಷ ಸೇವೆ ಸಲ್ಲಿಸಿ, ಉನ್ನತಮಟ್ಟದ ಅಧಿಕಾರಿಯಾಗಿಯೂ ಕಾರ್ಯನಿರ್ವಹಿಸಿ ಇದೀಗ ಮರಳಿ ಸ್ವಗ್ರಾಮಕ್ಕೆ ಬಂದಿದ್ದಾರೆ. ಸ್ವಗ್ರಾಮಕ್ಕೆ ಬಂದ ಗಂಗಾಧರ ಅವರಿಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ ದೊರೆಯಿತು. ತಮ್ಮ 24 ವರ್ಷದ ಅವಧಿಯಲ್ಲಿ ಗಂಗಾಧರ ಅವರು ದೇಶದ ವಿವಿಧ ಗಡಿ ಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಈ ಯೋಧನನ್ನು ಶಾಸಕ ಅರವಿಂದ ಬೆಲ್ಲದ ಕೂಡ ಸನ್ಮಾನಿಸಿ, ಮರಳಿ ಸ್ವ ಗ್ರಾಮಕ್ಕೆ ಬರಮಾಡಿಕೊಂಡರು. ಇನ್ನು ಮನೆಯವರು ತಮ್ಮ ಹೆಮ್ಮೆಯ ಪುತ್ರನಿಗೆ ಆರತಿ ಬೆಳಗಿ ಮನೆಯ ಮಗನನ್ನು ಮತ್ತೆ ಮನೆ ತುಂಬಿಸಿಕೊಂಡರು.

Edited By : Shivu K
Kshetra Samachara

Kshetra Samachara

01/08/2022 08:09 pm

Cinque Terre

15.49 K

Cinque Terre

0

ಸಂಬಂಧಿತ ಸುದ್ದಿ