ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : BRTS ಕಾರಿಡಾರ್‌ನಲ್ಲಿ ವಾಹನ ಚಲಾಯಿದರೆ ಹುಷಾರ್.! ಮನೆಗೆ ಬರುತ್ತೆ ದಂಡದ ನೋಟಿಸ್

ಪಬ್ಲಿಕ್ ನೆಕ್ಸ್ಟ್ ವಿಶೇಷ-ಈರಣ್ಣ ವಾಲಿಕಾರ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಧ್ಯೆದ ಬಿಆರ್‌ಟಿಎಸ್ ಕಾರಿಡಾರ್ ನಲ್ಲಿ ಅನಗತ್ಯ ವಾಹನ ಸಂಚಾರಕ್ಕೆ ಕಡಿವಾಣ ಹಾಕಲು ಅಧಿಕಾರಿಗಳು ಹೊಸ ಯೋಜನೆ ರೂಪಿಸಿದ್ದಾರೆ. ಈ ಬಾರಿ ಸ್ವಯಂ ಚಾಲಿತ ವಾಹನ ನೋಂದಣಿ ಸಂಖ್ಯೆ ಗುರುತಿಸುವ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಪೊಲೀಸ್ ಇಲಾಖೆಯ ಸಂಚಾರ ನಿರ್ವಹಣಾ ಕೇಂದ್ರದ ಮೂಲಕ ವಾಹನ ಮಾಲೀಕರ ಮನೆಗೆ ದಂಡದ ನೋಟಿಸ್ ರವಾನಿಸಿ ದಂಡದ ಬಿಸಿ ಮುಟ್ಟಿಸಲು ಮುಂದಾಗಿದೆ.

ಹು-ಧಾ ನಡುವೆ ತ್ವರಿತ ಸಾರಿಗೆ ನೀಡಬೇಕೆಂಬ ಉದ್ದೇಶದಿಂದ ಹೊಸೂರು ಸರ್ಕಲ್ ದಿಂದ ಧಾರವಾಡದ ಜ್ಯುಬ್ಲಿ ಸರ್ಕಲ್ ವರೆಗೆ ಬಿಆರ್ ಟಿಎಸ್ ಪ್ರತ್ಯೇಕ ಕಾರಿಡಾರ್ ನಿರ್ಮಿಸಲಾಗಿದೆ. ಇಲ್ಲಿ ಚಿಗರಿ ಬಸ್ಸುಗಳು, ತುರ್ತು ಸೇವೆಯ ವಾಹನಗಳನ್ನು ಹೊರತುಪಡಿಸಿ ಉಳಿದೆಲ್ಲಾ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಕಾರಿಡಾರ್ ಪ್ರವೇಶಿಸದಂತೆ ಅಲ್ಲಲ್ಲಿ ಭದ್ರತಾ ಸಿಬ್ಬಂದಿ ನೇಮಿಸಿದ್ದರೂ ಕೂಡ ಕಡಿವಾಣ ಬಿದ್ದಿರಲಿಲ್ಲ. ಹೀಗಾಗಿ ಇದೀಗ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.

ಬೈಟ್- ಎಸ್ ಭರತ್, ವ್ಯವಸ್ಥಾಪಕ ನಿರ್ದೇಶಕರು, ಬಿಆರ್‌ಟಿಎಸ್

ಅನಗತ್ಯ ವಾಹನಗಳಿಗೆ ಪ್ರವೇಶಕ್ಕೆ ಕಡಿವಾಣ ಹಾಕಲು ಸ್ಮಾರ್ಟ್ ಸಿಟಿ ವತಿಯಿಂದ ಕಾರಿಡಾರ್ ಉದ್ದಕ್ಕೂ ಸ್ವಯಂ ಚಾಲಿತ ಬೂಂ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿದೆ. ಚಿಗರಿ ಬಸ್, ತುರ್ತು ಸೇವೆಯ ವಾಹನಗಳಿಗೆ ಟ್ಯಾಗ್ ವಿತರಿಸಲಾಗಿದೆ. ಕಾರಿಡಾರ್ ನಲ್ಲಿ ನಿಯಮ ಉಲ್ಲಂಘಿಸಿ ಪ್ರವೇಶಿಸುವ ವಾಹನಗಳಿಗೆ ಮೊದಲು 500 ರೂ ದಂಡ ವಿಧಿಸಲಾಗುತ್ತಿದೆ.

ಉಲ್ಲಂಘಿಸಿ ಕಾರಿಡಾರ್ ಪ್ರವೇಶಿಸುವ ವಾಹನಗಳಿಂದ ಅಪಘಾತ ಸಂಭವಿಸಿದರೇ ಅದಕ್ಕೆ ಖಾಸಗಿ ವಾಹನ ಸವಾರರೇ ನೇರ ಹೊಣೆಗಾರರನ್ನಾಗಿಸುತ್ತಿದೆ. ಇದಕ್ಕೆ ಈಗಾಗಲೇ ನಿಯಮ ಉಲ್ಲಂಘನೆ ತಡೆ ಹಾಗೂ ಪತ್ತೆಗಾಗಿ ಅತ್ಯಾಧುನಿಕ ಸ್ವಯಂಚಾಲಿತವಾಗಿ ವಾಹನಗಳ ನೋಂದಣಿ ಸಂಖ್ಯೆ ಗುರುತಿಸುವ ವಿಶೇಷ ಕ್ಯಾಮೆರಾಗಳನ್ನು ಅಳವಡಿಸಿ ಕಾರಿಡಾರ್ ಪ್ರವೇಶಿಸಿದ ವಾಹನಗಳ ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ. ಆದಷ್ಟು ಖಾಸಗಿ ವಾಹನ ಚಾಲಕರು ಬಿಆರ್‌ಟಿಎಸ್ ಬ್ಯಾರಿಕೇಡ್‌ದಲ್ಲಿ ಚಲಿಸಿದರೆ ನಿಮ್ಮ ಮನೆಗೆ ದಂಡದ ನೋಟಿಸ್ ಬರುವುದು ಪಕ್ಕಾ.

-ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ

Edited By : Shivu K
Kshetra Samachara

Kshetra Samachara

26/07/2022 02:33 pm

Cinque Terre

36.13 K

Cinque Terre

27

ಸಂಬಂಧಿತ ಸುದ್ದಿ