ಧಾರವಾಡ: ಸುಮಾರು 8 ವರ್ಷಗಳಿಂದ ಕ್ಷಲ್ಲಕ ಕಾರಣದಿಂದ ದೂರವಾಗಿ ಬಾಳುತ್ತಿದ್ದ ಮಹೇಂದ್ರ ಮತ್ತು ನಿವೇದಿತಾ ಆಚಾರ ದಂಪತಿ ಪರಸ್ಪರ ಮತ್ತೆ ಒಂದಾಗಿ ಬಾಳುವಂತೆ ಕರ್ನಾಟಕ ಉಚ್ಛ ನ್ಯಾಯಾಲಯದ ಕಾನೂನು ಸೇವಾ ಸಮಿತಿ ಮಾಡಿದೆ.
ಎಸ್.ಎಸ್.ಭಾವಾಖಾನ ಅವರ ಮಧ್ಯಸ್ಥಿಕೆಯಲ್ಲಿ ಈ ಪ್ರಕರಣವನ್ನು ಇತ್ಯರ್ಥಗೊಳಿಸಿ, ದಂಪತಿಯನ್ನು ಒಂದುಗೂಡಿಸಿದೆ.
ದಂಪತಿಗೆ ಒಂದು ಮುದ್ದಾದ ಹೆಣ್ಣು ಮಗು ಇದ್ದು, ಅವಳ ಮುಂದಿನ ಭವಿಷ್ಯಕ್ಕಾಗಿ ಕೂಡಿಕೊಂಡು ಸಂತೋಷವಾಗಿ ಇರುವಂತೆ ಪ್ರಕರಣವನ್ನು ಕರ್ನಾಟಕ ಉಚ್ಛ ನ್ಯಾಯಾಲಯ ಕಾನೂನು ಸೇವಾ ಸಮಿತಿಯು ಇತ್ಯರ್ಥಗೊಳಿಸಿದೆ. ನಿವೇದಿತಾ ಕೋಂ ಮಹೇಂದ್ರ ಆಚಾರ ಅವರ ಪರವಾಗಿ ಸಮಿತಿಯ ಸದಸ್ಯೆ ನ್ಯಾಯವಾದಿ ಶಶಿಕಲಾ ಕೆ. ಪತ್ರಿ ಅವರು ವಕಾಲತ್ತನ್ನು ವಹಿಸಿದ್ದರು. ಪ್ರಕರಣವನ್ನು ಮಹೇಂದ್ರ ವಿ. ಆಚಾರ ಅವರು ವಕೀಲ ವೆಂಕಟೇಶ ಎಮ್.ಕಾರ್ವಿ ಅವರ ಮೂಲಕ ನ್ಯಾಯಾಲದಲ್ಲಿ ದಾಖಲಿಸಿದ್ದರು. ಸಮಿತಿಯ ಮೂಲಕ ಉಭಯ ಪರ ವಕೀಲರ ಸತತ ಪ್ರಯತ್ನದ ಫಲವಾಗಿ ಇಂದು ಎಸ್.ಎಸ್. ಭಾವಾಖಾನ ಅವರ ಮಧ್ಯಸ್ಥಿಕೆಯಲ್ಲಿ ರಾಜಿ ಪತ್ರವನ್ನು ಸಿದ್ಧಪಡಿಸಿ, ಉಭಯ ಪಕ್ಷಗಾರರಿಗೆ ಓದಿ ಹೇಳಲಾಯಿತು. ಇದಕ್ಕೆ ಒಪ್ಪಿಗೆಯನ್ನು ನೀಡಿದ ಉಭಯ ಪಕ್ಷಗಾರರ ರುಜುಗಳನ್ನು ಪತ್ರದ ಮೇಲೆ ಪಡೆಯಲಾಯಿತು.
ದಂಪತಿಯನ್ನು ನ್ಯಾಯಾಧೀಶ ಇ.ಎಸ್.ಇಂದಿರೇಶ ಅವರ ಮುಂದೆ ಹಾಜರು ಪಡಿಸಲಾಯಿತು. ನ್ಯಾಯಾಧೀಶರುಗಳು ದಂಪತಿಯೊಂದಿಗೆ ಸಮಾಲೋಚಿಸಿ, 8 ವರ್ಷಗಳಿಂದ ಕ್ಷುಲಕ ಕಾರಣದಿಂದ ಒಂದೇ ಊರಿನಲ್ಲಿ ಇದ್ದರೂ ದೂರವಾಗಿ ಬಾಳುತ್ತಿದ್ದ ಅವರಿಗೆ ತಿಳುವಳಿಕೆಯ ಜೊತೆಗೆ ಮುದ್ದಾದ ಹೆಣ್ಣು ಮಗುವಿನೊಂದಿಗೆ ಅವಳ ಮುಂದಿನ ಭವಿಷ್ಯಕ್ಕಾಗಿ ಕೂಡಿಕೊಂಡು ಸಂತೋಷವಾಗಿ ಇರಲು ತಿಳಿಸಿದರು ಎಂದು ಉಚ್ಛ ನ್ಯಾಯಾಲಯ ಕಾನೂನು ಸೇವಾ ಸಮಿತಿಯ ಅಧೀಕ ವಿಲೇಖನಾಧಿಕಾರಿಗಳು (ನ್ಯಾಯಾಂಗ) ಮತ್ತು ಕಾರ್ಯದರ್ಶಿ ವೆಂಕಟೇಶ ಆರ್ ಹುಲಗಿ ತಿಳಿಸಿದ್ದಾರೆ.
Kshetra Samachara
20/07/2022 10:32 pm