ಹುಬ್ಬಳ್ಳಿ: ಇದು ಆಸ್ಪತ್ರೆಯೋ? ದನದ ಕೊಟ್ಟಿಗೆಯೋ ? ಒಂದು ಕೂಡ ಅರ್ಥವಾಗುತ್ತಿಲ್ಲ. ಈ ಆಸ್ಪತ್ರೆಯಲ್ಲಿ ಯಾರೋ ಬಂದು ಏನ್ ಬೇಕಾದ್ರೂ ತೆಗೆದುಕೊಂಡು ಹೋಗಬಹುದು. ಅಷ್ಟಕ್ಕೂ ಯಾವುದು ಈ ಆಸ್ಪತ್ರೆ ಅಂತೀರಾ..? ಅದೇ ನಮ್ಮ ಹುಬ್ಬಳ್ಳಿಯ ಆನಂದನಗರದ ಪ್ರಾಥಮಿಕ ಆರೋಗ್ಯ ಕೇಂದ್ರ.
ಹೌದು.. ಈ ಆಸ್ಪತ್ರೆಗೆ ಹೇಳುವವರು ಇಲ್ಲ, ಕೇಳುವವರು ಇಲ್ಲ. ಈ ಸರ್ಕಾರಿ ಆಸ್ಪತ್ರೆಗೆ ದಿಕ್ಕು ಸಹ ಯಾರು ಇಲ್ಲ. ಹುಬ್ಬಳ್ಳಿಯ ಆನಂದ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರ ರಾತ್ರಿಯಿಡೀ ಓಪನ್ ಆಗಿದ್ದು, ಸಿಬ್ಬಂದಿಗಳು ಬೀಗ ಹಾಕದೆ ಬಿಟ್ಟು ಹೋಗಿದ್ದಾರೆ. ಇದು ಇಲ್ಲಿರುವ ಸಿಬ್ಬಂದಿಯ ಬೇಜವಾಬ್ದಾರಿಯೋ ಅಥವಾ ಆಲಸ್ಯತನವೋ ಗೊತ್ತಿಲ್ಲ. ಡ್ಯೂಟಿ ಮುಗಿಸಿ ಮನೆಗೆ ಹೋಗುವಾಗ ಆಸ್ಪತ್ರೆಗೆ ಬೀಗ ಹಾಗದೆ ಯಥಾಸ್ಥಿತಿ ಬಿಟ್ಟು ಹೋಗಿದ್ದು, ಸಾರ್ವಜನಿಕರು ಈ ಅವ್ಯವಸ್ಥೆಯನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದು ಮಾಧ್ಯಮಕ್ಕೆ ನೀಡಿದ್ದಾರೆ.
ಆಸ್ಪತ್ರೆಗಳು ಓಪನ್ ಇದ್ದರೆ ಏನೂ ತಪ್ಪಿಲ್ಲ. ಆದರೆ ಓರ್ವ ಸಿಬ್ಬಂದಿಯಾದರೂ ಕಾರ್ಯನಿರ್ವಹಣೆ ಮಾಡಬೇಕಿತ್ತು. ಇಲ್ಲಿ ಯಾವುದೇ ಒಂದು ನರಪಿಳ್ಳೆ ಸಹ ಕಾಣ ಸಿಗುತ್ತಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ಸ್ಥಳೀಯರು. ಆದ್ರೂ ಸ್ಥಳೀಯರ ಮಾತಿಗೆ ಡೋಂಟಕೇರ್ ಎನ್ನುತ್ತಿದ್ದಾರೆ ಹಿರಿಯ ಅಧಿಕಾರಿಗಳು. ಆಸ್ಪತ್ರೆಯಲ್ಲಿ ಬೆಲೆಬಾಳುವ ವಸ್ತುಗಳಿವೆ, ಅಷ್ಟೇ ಅಲ್ಲದೇ ವೈದ್ಯಕೀಯ ಸಲಕರಣೆಗಳು, ಮೆಡಿಸನ್‌ಗಳಿವೆ. ಇವುಗಳನ್ನ ಯಾರಾದರೂ ತೆಗೆದುಕೊಂಡು ಹೋದ್ರೆ ಹೊಣೆ ಯಾರು..? ಇಂತಹ ಸಿಬ್ಬಂದಿಗಳಿಗೆ ಬಿಸಿ ಮುಟ್ಟಿಸುವವರು ಯಾರು..? ಎಂಬುವುದು ಸಾರ್ವಜನಿಕ ವಲಯದ ಯಕ್ಷ ಪ್ರಶ್ನೆಯಾಗಿದೆ.
Kshetra Samachara
26/06/2022 01:46 pm