ಧಾರವಾಡ: ಬಾಗಲಕೋಟೆ ಆರ್‌ಟಿಒ ಇನ್‌ಸ್ಪೆಕ್ಟರ್ ಯಲ್ಲಪ್ಪ ಪಡಸಾಲೆ ಅವರ ಮನೆ ಮೇಲೆ ನಿನ್ನೆ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು ಶನಿವಾರವೂ ಅವರ ಮನೆಯಲ್ಲಿ ಹಲವು ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದರು.
ಇಂದು ಬೆಳ್ಳಂಬೆಳಿಗ್ಗೆ ಮತ್ತೆ ಪಡಸಾಲೆ ಅವರ ಮನೆಗೆ ತೆರಳಿದ ಎಸಿಬಿ ತಂಡ, ಯಲ್ಲಪ್ಪ ಅವರನ್ನು ಕರೆದುಕೊಂಡು ಧಾರವಾಡದ ಹಳೇ ಡಿವೈಎಸ್ಪಿ ಸರ್ಕಲ್ ಬಳಿ ಇರುವ ಕೆನರಾ ಬ್ಯಾಂಕ್‌ಗೆ ಬಂದು ಅವರ ಬ್ಯಾಂಕ್ ಲಾಕರ್ ಓಪನ್ ಮಾಡಿಸಿದ್ದಾರೆ.
ನಿನ್ನೆ ಯಲ್ಲಪ್ಪ ಅವರ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ 16 ಲಕ್ಷ ರೂ., ಅರ್ಧ ಕೆಜಿ ತೂಕದ ಚಿನ್ನದ ಆಭರಣ ಪತ್ತೆಯಾಗಿದ್ದವು. ಶನಿವಾರವೂ ಎಸಿಬಿ ಅಧಿಕಾರಿಗಳು ಪರಿಶೀಲನೆ ಮುಂದುವರೆಸಿದ್ದಾರೆ.
Kshetra Samachara
18/06/2022 04:36 pm