ಧಾರವಾಡ: ಅಗ್ನಿಪಥ ಯೋಜನೆ ವಿರೋಧಿಸಿ ಧಾರವಾಡದ ಹಳೆ ಡಿವೈಎಸ್ಪಿ ಕಚೇರಿ ವೃತ್ತದ ಬಳಿ ನಡೆದ ಪ್ರತಿಭಟನೆ ಹಾಗೂ ಲಾಠಿ ಚಾರ್ಜ್ ಬೆನ್ನಲ್ಲೇ ಮತ್ತೊಂದು ಯುವಕರ ಗುಂಪು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಗೆ ಮುಂದಾಗಿತ್ತು.
ಈ ವೇಳೆ ಪೊಲೀಸರು ಅಲ್ಲಿಂದಲೂ ಯುವಕರನ್ನು ಚದುರಿಸಿ ಕೆಲ ಯುವಕರನ್ನು ವಶಕ್ಕೆ ಪಡೆದರು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆಗೆ ಮುಂದಾದ ಯುವಕರನ್ನು ಪೊಲೀಸರು ಚದುರಿಸಲು ಮುಂದಾದಾಗ ಕೆಲವೊಂದಿಷ್ಟು ಯುವಕರು ದಿಕ್ಕಾಪಾಲಾಗಿ ಓಡಿ ಹೋದರು. ಇನ್ನೂ ಕೆಲ ಯುವಕರನ್ನು ಪೊಲೀಸರು ವಶಕ್ಕೆ ಪಡೆದರು.
Kshetra Samachara
18/06/2022 03:59 pm