ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನಿಯಮಬಾಹಿರ ನಾಮಫಲಕಗಳಿಗೆ ಬ್ರೇಕ್: ಪ್ರಾದೇಶಿಕ ಸಾರಿಗೆ ಆಯುಕ್ತರ ಮಹತ್ವದ ನಿರ್ಧಾರ...

ಹುಬ್ಬಳ್ಳಿ: ಪ್ರತಿಯೊಬ್ಬರೂ ತಮ್ಮ ತಮ್ಮ ವಾಹನದ ನಾಮಫಲಕಗಳ ಮೇಲೆ ತಮ್ಮದೇ ಆದ ರೀತಿಯಲ್ಲಿ ಹೆಸರು ಹಾಗೂ ಚಿತ್ರಗಳನ್ನು ಬರೆಸಿ ಪೊಲೀಸರಿಗೆ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಯಾಮಾರಿಸಲು ಪ್ಲ್ಯಾನ್ ಮಾಡಿರುವವರಿಗೆ ಬಿಸಿ ಮುಟ್ಟಿಸಲು ಪ್ರಾದೇಶಿಕ ಸಾರಿಗೆ ಆಯುಕ್ತರು ಪ್ಲ್ಯಾನ್ ಮಾಡಿದ್ದಾರೆ.

ಹೌದು. ಸರ್ಕಾರದ ಇಲಾಖೆಗಳ ವಾಹನಗಳನ್ನು ಹೊರತುಪಡಿಸಿ (ಜಿ, ಜಿಎ, ಜಿಬಿ ಶ್ರೇಣಿ ) ನಿಗಮ, ಮಂಡಳಿ, ಸಂಘ ಸಂಸ್ಥೆ ಇತ್ಯಾದಿಗಳ ಅಧೀನಕ್ಕೆ ಒಳಪಡುವ ಕಚೇರಿಗಳ ಖಾಸಗಿ ವಾಹನಗಳ ಮೇಲೆ ಸರ್ಕಾರದ ಲಾಂಛನ, ಚಿಹ್ನೆಗಳನ್ನು ತೆರವುಗೊಳಿಸುವಂತೆ ಹುಬ್ಬಳ್ಳಿ ಗಬ್ಬೂರಿನಲ್ಲಿರುವ ಪೂರ್ವ ವಿಭಾಗದ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ದಾಮೋದರ ಆದೇಶಿಸಿದ್ದಾರೆ.

ನೋಂದಣಿ ಸಂಖ್ಯಾ ಫಲಕಗಳನ್ನು ಕೇಂದ್ರ ಮೋಟಾರು ವಾಹನಗಳ ನಿಯಮಗಳು 1989ರ ನಿಯಮ 50 ರಲ್ಲಿ ನಿಗಧಿಪಡಿಸಿರುವ ಮಾನದಂಡಗಳಿಗೆ ಅನುಗುಣವಾಗಿ ಅಳವಡಿಸಬೇಕು. ಕರ್ನಾಟಕ ಮೋಟಾರು ವಾಹನಗಳ ನಿಯಮಗಳು 1989 ನಿಯಮ 145- ಎ ನಲ್ಲಿ ಖಾಸಗಿ ವಾಹನಗಳು ಸರ್ಕಾರದ ಲಾಂಛನ ಹಾಗೂ ಚಿಹ್ನೆಗಳನ್ನು ಪ್ರದರ್ಶಿಸುವುದನ್ನು ಸರ್ಕಾರ ನಿರ್ಬಂಧಿಸಿದೆ. ಕೇಂದ್ರದ, ಭಾರತದ ಲಾಂಛನಗಳು ಅನುಚಿತ ಬಳಕೆಯ ನಿಷೇಧ ಕಾಯಿದೆ 2005ರ ಕಲಂ 3 ರಲ್ಲಿ ಯಾವುದೇ ಖಾಸಗೀ ವಾಹನಗಳ ಮಾಲೀಕರು ತಮ್ಮ ವಾಹನಗಳ ಮೇಲೆ ಸರ್ಕಾರಿ ಲಾಂಛನ ಅಥವಾ ಹೆಸರುಗಳನ್ನು ಅಳವಡಿಸಬೇಕಾದಲ್ಲಿ ಕೇಂದ್ರ ಸರ್ಕಾರದಿಂದ ಅನುಮತಿ ಪಡೆದುಕೊಳ್ಳುವುದು ಅವಶ್ಯಕವಾಗಿರುತ್ತದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ತಿಳಿಸಿದ್ದಾರೆ.

ಒಟ್ಟಿನಲ್ಲಿ ಪ್ರಾದೇಶಿಕ ಸಾರಿಗೆ ಆಯುಕ್ತರು ಹಲವಾರು ಬಾರಿ ಈ ರೀತಿಯಲ್ಲಿ ನಿರ್ಧಾರವನ್ನು ಕೈಗೊಳ್ಳುತ್ತಾರೆ. ಆದರೆ ಇವು ಸರಿಯಾದ ರೀತಿಯಲ್ಲಿ ನಡೆಯುವುದಿಲ್ಲ. ಈ ಬಾರಿ ಯಾವ ರೀತಿಯಲ್ಲಿ ಕಾರ್ಯಾಚರಣೆ ನಡೆಯಲಿದೆ ಎಂಬುವುದನ್ನು ಕಾದು ನೋಡಬೇಕಿದೆ.

Edited By : Shivu K
Kshetra Samachara

Kshetra Samachara

04/06/2022 04:10 pm

Cinque Terre

41.96 K

Cinque Terre

7

ಸಂಬಂಧಿತ ಸುದ್ದಿ