ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಗಲಭೆ ಕೇಸ್‌: ಪೊಲೀಸರಿಗೆ ಕೋರ್ಟ್ ಚಾಟಿ; ಎಡವಿದ್ದಾದರೂ ಎಲ್ಲಿ.?

ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಎದುರು ಏಪ್ರಿಲ್ 16ರ ರಾತ್ರಿ ನಡೆದ ಗಲಭೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಹೈಕೋರ್ಟ್ ಪೀಠವು ಪೊಲೀಸರಿಗೆ ಚಾಟಿ ಬೀಸಿದೆ.

ಪೊಲೀಸ್ ಠಾಣೆ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಗಲಾಟೆ ಮಾಡಿದ್ದ 157 ಜನರ ವಿರುದ್ಧ 12 ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದರು. ಒಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವು ದೂರುಗಳನ್ನು ದಾಖಲಿಸಿಕೊಂಡಿದ್ದು ಸರಿಯಲ್ಲ. ಹೀಗಾಗಿ ಪೊಲೀಸರು ದಾಖಲಿಸಿಕೊಂಡಿರುವ ಪ್ರಕರಣಗಳು ಅನುರ್ಜಿತಗೊಳಿಸಬೇಕೆಂದು ಮಹಮ್ಮದ್ ಆರೀಫ್ ನಾಗರಾಳ ಸೇರಿದಂತೆ ಇತರ 157 ಜನರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ವಾದ- ಪ್ರತಿವಾದ ಆಲಿಸಿದ ಹೈಕೋರ್ಟ್‌ನ ಏಕಸದಸ್ಯ ಪೀಠ, ಪ್ರಕರಣದ ಕುರಿತು ಹೆಚ್ಚಿನ ವಿಚಾರಣೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ. ಪೊಲೀಸರು ದಾಖಲಿಸಿಕೊಂಡಿದ್ದ 12 ಪ್ರಕರಣಗಳ ಪೈಕಿ, 11 ಪ್ರಕರಣಗಳಿಗೆ ಮಧ್ಯಂತರ ತಡೆಯಾಜ್ಞೆ ನೀಡಿ, ವಿಚಾರಣೆಯನ್ನು ಜೂ.7ಕ್ಕೆ ಮುಂದೂಡಿದೆ.

ಈ ಗಲಭೆಗೆ ಸಂಬಂಧಿಸಿ ಯುಎಪಿಎ ಅಂತ ಕೇಸ್ ಕೂಡ ದಾಖಲಾಗಿವೆ. ಆದರೆ ಎನ್‌ಐಎ ಇದಕ್ಕೆ ತನಿಖೆ ಮಾಡಬೇಕಾಗುತ್ತದೆ. ಪೊಲೀಸರ ವ್ಯಾಪ್ತಿಗೆ ಯುಎಪಿಎ ಕೆಸ್ ಹಾಕಲು ಬರಲ್ಲ. ಪೊಲೀಸರು ರಾಷ್ಟ್ರ ವಿರೋಧಿ ಚಟುವಟಿಕೆ ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಆದರೆ ಇದರಲ್ಲಿ ಅಂತ ಏನು ಸಂಗತಿ ಕಂಡು ಬಂದಿಲ್ಲ. ಇದೇ ಕಾರಣಕ್ಕೆ ಈಗಾಗಲೇ 7 ಜನರಿಗೆ ಆಗಲೇ ಜಾಮೀನು ಕೊಡಲಾಗಿದೆ. ಓರ್ವ ಬಾಕಲನಿಗೆ ಕೂಡ ಬೆಲ್ ಆಗಿದೆ. ಮೇಲ್ನೋಟಕ್ಕೆ ಇದರಲ್ಲಿ ಅಮಾಯಕರು ಇದಾರೆಂಬುದು ಕೂಡ ಇದೆ. ಗಲಭೆ ವೇಳೆ ಯಾರು ಯಾವುದಕ್ಕೆ ಬಂದಿದ್ದರು ಎಂದು ತಿಳಿದಿಕೊಳ್ಳದೇ ಎಫ್‌‌ಐಆರ್ ಮಾಡಲಾಗಿದೆ ಎಂದು ಆರೋಪಿತರ ಪರ ವಕೀಲ ವಿಶ್ವನಾಥ್ ವಾದ ಮಂಡಿಸಿದ್ದರು. ಇದೇ ಕಾರಣಕ್ಕೆ ಈಗ ಧಾರವಾಡದ ಹೈಕೋರ್ಟ್ 11 ಎಫ್‌ಐಆರ್‌ಗಳಿಗೆ ತಡೆಯಾಜ್ಞೆ ನೀಡಿದೆ.

ಹಳೇ ಹುಬ್ಬಳ್ಳಿಯ ಗಲಭೆ ಪ್ರಕರಣದಲ್ಲಿ ಪೊಲೀಸರು ಎಡವಿದ್ದು ಎಲ್ಲಿ? ಅತಿ ಹೆಚ್ಚು ಜನರನ್ನು ಬಂಧಿಸಬೇಕೆಂಬ ಭರಾಟೆಯಲ್ಲಿ ಪೊಲೀಸರು ಅಮಾಯಕರನ್ನು ಬಂಧಿಸಿದ್ರಾ? ಇದಕ್ಕೆಲ್ಲವೂ ಉತ್ತರ ಕೋರ್ಟ್ ವಿಚಾರಣೆಯಲ್ಲಿಯೇ ಹೊರಬರಬೇಕಿದೆ.

Edited By : Shivu K
Kshetra Samachara

Kshetra Samachara

18/05/2022 09:56 pm

Cinque Terre

47.6 K

Cinque Terre

12

ಸಂಬಂಧಿತ ಸುದ್ದಿ