ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರಿ ಸರಕು ವಾಹನಗಳ ಸಂಚಾರಕ್ಕೆ ಅನುಮತಿ ನೀಡಿದ ಪೊಲೀಸ್ ಕಮೀಷನರ್

ಹುಬ್ಬಳ್ಳಿ: ನಗರದಲ್ಲಿ ವ್ಯಾಪರ ವಹಿವಾಟಿಗೆ ಯಾವುದೇ ರೀತಿ ತೊಂದರೆ ಮತ್ತು ವಾಹನ ದಟ್ಟಣೆ ನಿಯಂತ್ರಣ ಮಾಡುವ ಉದ್ದೇಶದಿಂದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಸೂಕ್ತ ಕ್ರಮ ತೆಗೆದುಕೊಂಡಿದ್ದಾರೆ.

ಈ ಮೊದಲು ನಗರದಲ್ಲಿ ವಾಹನ ದಟ್ಟಣೆಯಾಗುತ್ತದೆ ಎಂದು ಭಾರಿ ವಾಹನಗಳನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದ ವ್ಯಾಪಾರೋದ್ಯಮಕ್ಕೆ ಸ್ವಲ್ಪ ತಡೆಯಾಗಿತ್ತು. ಈಗ ಅದನ್ನು ಪರಿಷ್ಕರಿಸಿದ ಪೊಲೀಸ್ ಆಯುಕ್ತರು ಸರಕು ಸಾಗಾಣಿಗೆ ತೊಂದರೆಯಾಗ ಬಾರದು ಎಂಬ ಉದೇಶದಿಂದ ಮಧ್ಯಾಹ್ನ 12 ರಿಂದ ಸಂಜೆ 4 ಗಂಟೆಯವರೆಗೆ ಮತ್ತು ರಾತ್ರಿ 9 ಗಂಟೆಯಿಂದ ಬೆಳಗ್ಗೆ 7 ಗಂಟೆವರೆಗೆ ನಗರದಲ್ಲಿ ಭಾರಿ ಸರಕು ವಾಹನಗಳಿಗೆ ಸಂಚರಿಸಲು ಅನುಮತಿ ನೀಡಲಾಗಿದೆ.

ಇನ್ನೂಳಿದ ಸಮಯದಲ್ಲಿ ಹುಬ್ಬಳ್ಳಿ-ಧಾರವಾಡ ನಗರದ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಹಾಗೂ ಸಾರ್ವಜನಿಕರ ಸುಗಮ ಸಂಚಾರದ ಹಿತದೃಷ್ಠಿಯಿಂದ ಭಾರಿ ಸರಕು ವಾಹನಗಳ ಸಂಚಾರ ನಿರ್ಭಂದಿಸಿ ಆದೇಶವನ್ನು ಹೊರಡಿಸಲಾಗಿರುತ್ತದೆ. ಕಾರಣ ಸಂಬಂಧ ಪಟ್ಟ ಭಾರಿ ಸರಕು ವಾಹನಗಳ ಮಾಲಿಕರು, ಚಾಲಕರು ಈ ಆದೇಶವನ್ನು ತಪ್ಪದೆ ಪಾಲಿಸಲು ಸೂಚಿಸಿದೆ. ತಪ್ಪಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು.

Edited By :
Kshetra Samachara

Kshetra Samachara

04/04/2022 09:04 am

Cinque Terre

18.82 K

Cinque Terre

2

ಸಂಬಂಧಿತ ಸುದ್ದಿ