ಹುಬ್ಬಳ್ಳಿ: ಹಿಜಾಬ್ ಕುರಿತಾಗಿ ಇತ್ತೀಚೆಗೆ ನ್ಯಾಯಾಲಯ ನೀಡಿದ ತೀರ್ಪನ್ನು ಮರುಪರಿಶೀಲನೆ ಮಾಡಬೇಕೆಂದು ಹುಬ್ಬಳ್ಳಿಯ ಇದಾರ-ಎ-ಗರೀಬ ನವಾಜ್ ಒತ್ತಾಯಿಸಿದೆ.
ಇದಾರ-ಎ-ಗರೀಬ ನವಾಜ ಅಧ್ಯಕ್ಷ ವಸೀಮ್ ಅಕ್ರಮ್ ಹಕೀಮ ಮಾತನಾಡಿ, ಭಾರತವು ಜಾತ್ಯಾತೀತ ಮತ್ತು ಲಿಖಿತ ಸಂವಿಧಾನ ಹೊಂದಿರುವ ದೇಶ. ಇಲ್ಲಿನ ನಾಗರಿಕರು ಜಾತಿ, ಧರ್ಮ ಭೇದವಿಲ್ಲದೇ ತಮ್ಮ ತಮ್ಮ ಧರ್ಮವನ್ನು ಅನುಸರಿಸುತ್ತಾ ಒಗ್ಗಟ್ಟಿನಿಂದ ಶಾಂತಿ ಮತ್ತು ಸಹೋದರತೆಯಿಂದ ಜೀವಿಸುತ್ತಿದ್ದಾರೆ. ಅಲ್ಲದೇ ಸಂವಿಧಾನದ 25 ಅನುಚ್ಛೇದ ಧಾರ್ಮಿಕ ಹಕ್ಕನ್ನು ನೀಡಿದೆ. ಆದರೆ ಮಾ.17 ರಂದು ಕರ್ನಾಟಕ ಉಚ್ಚ ನ್ಯಾಯಾಲಯ ಹಿಜಾಬ್ ಕುರಿತು ಇತ್ತೀಚೆಗೆ ನೀಡಿದ ತೀರ್ಪು ಧಾರ್ಮಿಕ ಹಕ್ಕಿನ ವಿರುದ್ದವಾಗಿದೆ ಎಂದು ಕಳಕಳ ವ್ಯಕ್ತಪಡಿಸಿದರು.
ಉಚ್ಛ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಕಡ್ಡಾಯ ಅಂಶವಲ್ಲವೆಂದು ತಿಳಿಸಿದೆ. ಆದರೆ ಧರ್ಮದ ಪವಿತ್ರ ಗ್ರಂಥ ಕುರಾನಿನಲ್ಲಿ ಮುಸ್ಲಿಂ ಮಹಿಳೆಯರು ಕಡ್ಡಾಯವಾಗಿ ಹಿಜಾಬ್, ಪರ್ದಾ ಮಾಡುವುದು ಕಡ್ಡಾಯವಾಗಿದೆ. ಈ ದಿಸೆಯಲ್ಲಿ ಕೋರ್ಟ್ ತೀರ್ಪು ಭಾರತೀಯ ಮುಸ್ಲಿಮರಿಗೆ ತುಂಬ ನೋವು, ಬೇಸರ ತರಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯ ನೀಡಿರುವ ತೀರ್ಪನ್ನು ಮರುಪರಿಶೀಲಿಸಬೇಕೆಂದು ಮನವಿ ಮಾಡಿದರು.
Kshetra Samachara
18/03/2022 02:58 pm