ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಜೀವನದಲ್ಲಿ ಕಾನೂನು ಅರಿವು ಮುಖ್ಯ-ಅನುರಾಧಾ ಟಿ.ಎಚ್

ಕುಂದಗೋಳ: ಕಾನೂನು ಎಲ್ಲ ರೀತಿಯಲ್ಲಿ ಜೀವನಕ್ಕೆ ಸಹಕಾರ, ಕಾನೂನಿಲ್ಲದೇ ಜೀವನ ನಡೆಯುವುದಿಲ್ಲ ಪ್ರತಿಯೊಂದು ವಿಷಯವೂ ಕಾನೂನನ್ನು ಅವಲಂಬಿಸಿದೆ ಎಂದು ಜೆ.ಎಮ್.ಎಫ್.ಸಿ ನ್ಯಾಯಾಧೀಶೆ ಅನುರಾಧಾ ಟಿ.ಎಚ್ ಹೇಳಿದರು.

ಅವರು ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ನಡೆದ ಜೆ.ಎಸ್ ಪಾಟೀಲ ಕಲಾ ಹಾಗೂ ವಾಣಿಜ್ಯ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮದಲ್ಲಿ ಕಾನೂನು ಅರಿವು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಗ್ರಾಮದ ಜನರಿಗೆ ಕಾನೂನಿನ ತಿಳುವಳಿಕೆ ಮತ್ತು ಬಳಕೆಯ ರೀತಿ ವಿವರಿಸಿದರು.

ಬಳಿಕ ಹಿರಿಯ ಶ್ರೇಣಿ ನ್ಯಾಯಾಧೀಶ ಪರಮೇಶ್ವರ್ ಪಿ.ಜೆ ಮಾತನಾಡಿ ಯಾವುದೇ ಆಸ್ತಿ ಖರೀದಿ ಸಂದರ್ಭದಲ್ಲಿ ದಾಖಲೆ ಅತಿ ಮುಖ್ಯ. ದಾಖಲೆ ಖರ್ಚನ್ನು ವಿಚಾರಿಸಿ ಕೈ ಬಿಟ್ಟು ವೃಥಾ ಹಣ ಕಳೆದುಕೊಳ್ಳಬೇಡಿ ಎಂದರು.

ಬಳಿಕ ಕಾರ್ಯಕ್ರಮದ ಅತಿಥಿಯಾಗಿದ್ದ ಜೆ.ಬಿ.ಸೊರಟೂರ ಹಾಗೂ ವಕೀಲರ ಸಂಘದ ಹಿರಿಯ ನ್ಯಾಯವಾದಿಗಳು, ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಈ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಉಪಸ್ಥಿತರಿದ್ದು, ಗ್ರಾಮೀಣ ಜನರಿಗೆ ಕಾನೂನಿನ ಅರಿವು ಮೂಡಿಸಿದರು.

Edited By : Manjunath H D
Kshetra Samachara

Kshetra Samachara

16/03/2022 05:50 pm

Cinque Terre

17.76 K

Cinque Terre

0

ಸಂಬಂಧಿತ ಸುದ್ದಿ