ಧಾರವಾಡ: ಹಿಜಾಬ್ ವಿಷಯದ ಕುರಿತು ನಿನ್ನೆ ಹೈಕೋರ್ಟ್‌ನಿಂದ ತೀರ್ಪು ಪ್ರಕಟವಾದ ಹಿನ್ನೆಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಧಾರವಾಡದಲ್ಲಿ ಸಿಆರ್‌ಪಿಎಫ್ ಯೋಧರು ಹಾಗೂ ಪೊಲೀಸರು ಪಥ ಸಂಚಲನ ನಡೆಸಿದರು.
ಧಾರವಾಡದ ಪ್ರಮುಖ ರಸ್ತೆಗಳಲ್ಲಿ ಸಿಆರ್‌ಪಿಎಫ್ ಯೋಧರು ಶಸ್ತ್ರ ಸಜ್ಜಿತರಾಗಿ ಪಥಸಂಚಲನ ನಡೆಸಿದರು. ಇವರಿಗೆ ಪೊಲೀಸರು ಕೂಡ ಸಾಥ್ ನೀಡಿದರು. ಈಗಾಗಲೇ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಯಲ್ಲಿದ್ದು, ಎಲ್ಲೂ ಕೂಡ ಗುಂಪುಗೂಡಿ ನಿಲ್ಲಲು, ಸಭೆಗಳನ್ನು ನಡೆಸಲು ಅವಕಾಶವಿಲ್ಲ. ಹೀಗಾಗಿ ಶಾಂತಿ ಮತ್ತು ಸುವ್ಯವಸ್ಥೆ ದೃಷ್ಠಿಯಿಂದ ಧಾರವಾಡದ ವಿವಿಧ ರಸ್ತೆಗಳಲ್ಲಿ ಡಿಸಿಪಿ ಸಾಹಿಲ್ ಬಾಗ್ಲಾ ನೇತೃತ್ವದಲ್ಲಿ ಈ ಪಥಸಂಚಲನ ನಡೆಯಿತು.
Kshetra Samachara
16/03/2022 03:14 pm