ಕುಂದಗೋಳ : ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ನೀಡಿದ ತೀರ್ಪನ್ನು ಪಂಚಗ್ರಹ ಹಿರೇಮಠದ ಶಿಥಿಕಂಠೇಶ್ವರ ಮಹಾಸ್ವಾಮಿ ಸ್ವಾಗತಿಸಿದ್ದಾರೆ.
ಈ ಕುರಿತು ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿ, ಹೈಕೋರ್ಟ್ ತೀರ್ಪು ಸ್ವಾಗತಾರ್ಹ ಹಿಜಾಬ್ ಧರಿಸದೇ ಶಾಲಾ ಕಾಲೇಜಿಗೆ ಹೋಗಿ ವಿದ್ಯಾಭ್ಯಾಸ ಮಾಡಿ, ಸಾಧನೆ ಮಾಡಿ ದೇಶವನ್ನು ಉನ್ನತಿ ಎಡೆಗೆ ಮುನ್ನಡೆಸಿ ಎಂದರು.
ಭಾರತದಲ್ಲಿ ಅಂಬೇಡ್ಕರ್ ಬರೆದ ಸಂವಿಧಾನಕ್ಕಿಂತ ಶ್ರೇಷ್ಠವಾದ ಅಂಶ ಮತ್ತೊಂದಿಲ್ಲ, ಅದಕ್ಕೆ ಬದ್ಧರಾಗಿ ಹಿಂದೂ ಮುಸ್ಲಿಂ ವಿದ್ಯಾರ್ಥಿಗಳು ಸಹೋದರ ಭಾವದಿಂದ ಇರಬೇಕು ಎಂದರು.
ಹಿಂದೂ ಮುಸ್ಲಿಂ ವಿದ್ಯಾರ್ಥಿಗಳು ಹೈಕೋರ್ಟ್ ತೀರ್ಪಿಗೆ ತಲೆ ಬಾಗಿ ಒಂದಾಗಿ ಚೆಂದಾಗಿ ಬಾಳಿರಿ ಎಂದು ಮಹಾಸ್ವಾಮಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
Kshetra Samachara
15/03/2022 01:29 pm