ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾತ್ರೋರಾತ್ರಿ ಧಾರವಾಡದ 13 ಜನ ಜೈಲು ಹಕ್ಕಿಗಳಿಗೆ ಬಂತು ಬಿಡುಗಡೆ ಭಾಗ್ಯ

ಪಬ್ಲಿಕ್ ನೆಕ್ಸ್ಟ್ ಎಕ್ಸ್‌ಕ್ಲೂಸಿವ್‌

ಧಾರವಾಡ: ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ 13 ಜನರಿಗೆ ಬಿಡುಗಡೆ ಭಾಗ್ಯ ಬಂದಿದ್ದು, ರಾತ್ರಿಯೇ ಜೈಲು ಹಕ್ಕಿಗಳು ಬಿಡುಗಡೆಯಾಗಿ ಮನೆಗೆ ಹಾರಿ ಹೋಗಿವೆ.

ಹೌದು! ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ 13 ಜನರನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡುವಂತೆ ಸರ್ಕಾರದಿಂದ ಪಟ್ಟಿ ಬಂದ ನಂತರ ಬಾಗಲಕೋಟೆ ಜಿಲ್ಲೆಯ ಚಿಮ್ಮನಕಟ್ಟೆಯ ಜಮ್ಮಣ್ಣ ಕಾಮಣ್ಣವರ, ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮತ್ತೂರು ಗ್ರಾಮದ ರಾಜು ರಾಮಸ್ವಾಮಿ, ಬಳ್ಳಾರಿ ಜಿಲ್ಲೆಯ ಸತ್ಯವಾಣಿ ನಗರದ ಯರ್ರಿಸ್ವಾಮಿ ಈರಣ್ಣ ಹಾಗೂ ನರಸಿಂಹಲು ಈರಣ್ಣ, ಹಾಸನದ ಗಿರೀಶ ಸಣ್ಣಯ್ಯ, ಶಿವಮೊಗ್ಗ ಜಿಲ್ಲೆಯ ಹಳ್ಳಿಕೆರೆಯ ಮಕಬುಲ್ ಪಾಪಸಾಬ್, ಗದಗದ ಮಾಡಳ್ಳಿಯ ಕೃಷ್ಣಾ ರೆಡ್ಡಿ, ಹುಬ್ಬಳ್ಳಿ ಸೆಟ್ಲಮೆಂಟ್‌ನ ಪರಶುರಾಮ ಮೊರಬ, ಹಾವೇರಿ ಜಿಲ್ಲೆಯ ಅರಲಾಂಕಪುರದ ಚಂದ್ರಪ್ಪ ಚಿಕ್ಕಣ್ಣವರ, ಹಾವೇರಿ ಜಿಲ್ಲೆಯ ನಾಗೇಂದ್ರಮಟ್ಟಿಯ ಮೆಹಬೂಬ್ ಸಾಬ್ ಕರ್ಜಗಿ ಹಾಗೂ ಶಂಕರ ಕೊಂಡೆಮ್ಮನವರ, ಹಾವೇರಿ ಜಿಲ್ಲೆಯ ಸಿದ್ದಾಪುರದ ಶ್ರೀಶೈಲಗೌಡ ಕರವೀಗೌಡರ ಹಾಗೂ ಬಳ್ಳಾರಿ ಜಿಲ್ಲೆಯ ಸತ್ಯವಾಣಿನಗರದ ಯರ್ರಿಗುಡಿ ಸೀನ ಎಂಬುವವರನ್ನು ರಾತ್ರಿಯೇ ಬಿಡುಗಡೆಗೊಳಿಸಲಾಗಿದೆ.

Edited By :
Kshetra Samachara

Kshetra Samachara

12/03/2022 01:55 pm

Cinque Terre

20.61 K

Cinque Terre

1

ಸಂಬಂಧಿತ ಸುದ್ದಿ