ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಹಿಜಾಬ್ ವಿವಾದ : ಕುಂದಗೋಳಕ್ಕೆ ಪೊಲೀಸ್ ಕಣ್ಗಾವಲು

ಕುಂದಗೋಳ : ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಪ್ರಕರಣ ಇತ್ಯರ್ಥವಾಗುವವರೆಗೂ ಶಾಲಾ-ಕಾಲೇಜುಗಳಿಗೆ ಹಿಜಾಬ್ ಅಥವಾ ಕೇಸರಿ ಶಾಲು ಧರಿಸಿ ಬರದಂತೆ ಹೈಕೋರ್ಟ್ ಆದೇಶ ನೀಡಿದೆ.

ಈ ಹಿನ್ನೆಲೆಯಲ್ಲಿ ಕಂದಗೋಳ ತಾಲೂಕಿನ ಶಾಲೆಗಳು ಸೇರಿದಂತೆ ಪಟ್ಟಣದ ಎಲ್ಲೇಡೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಹರಭಟ್ಟ ಶಾಲಾ ಆವರಣದ ಎದುರು ಒಬ್ಬ ಮಹಿಳಾ ಪೊಲೀಸ್ ಕರ್ತವ್ಯದಲ್ಲಿದ್ದರೇ, ಪಟ್ಟಣದ ವಿವಿಧೆಡೆ ಪೊಲೀಸರ ಗಸ್ತು ಕಾರ್ಯಾಚರಣೆಯ ಜೊತೆಗೆ ಪೊಲೀಸ್ ವಾಹನಗಳು ಪಟ್ಟಣದ ಗಾಳಿ ಮರೆಮ್ಮದೇವಿ ದೇವಸ್ಥಾನ ಹಾಗೂ ಶಿವಾನಂದ ಮಠದ ಹತ್ತಿರ ಭದ್ರತೆಗೆ ನಿಂತಿವೆ.

ಇದಲ್ಲದೆ ತಹಶೀಲ್ದಾರ್ ಅಶೋಕ್ ಶಿಗ್ಗಾಂವಿ ಸಹ ಕುಂದಗೋಳ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಶಾಲೆಗಳಿಗೆ ಭೇಟಿ ಕೊಟ್ಟು ವ್ಯವಸ್ಥೆ ಪರಿಶೀಲನೆ ನಡೆಸಿದ್ದಾರೆ.

ಒಟ್ಟಾರೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕುಂದಗೋಳ ಗ್ರಾಮೀಣ ಪೊಲೀಸರು ಸನ್ನದ್ಧರಾಗಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

14/02/2022 06:40 pm

Cinque Terre

15.76 K

Cinque Terre

0

ಸಂಬಂಧಿತ ಸುದ್ದಿ