ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹಿಜಾಬ್-ಕೇಸರಿ ಶಾಲು ವಿವಾದದ ಹತ್ತಿಕ್ಕಲು ಪೊಲೀಸ್ ಇಲಾಖೆ ವಿನೂತನ ಪ್ರಯತ್ನ

ಹುಬ್ಬಳ್ಳಿ: ಹಿಜಾಬ್‌ ಹಾಗೂ ಕೇಸರಿ ಶಾಲು ವಿವಾದವು ಜಿಲ್ಲೆಯಲ್ಲೂ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆಯು ನಗರದ ಪ್ರಮುಖ ರಸ್ತೆಗಳಲ್ಲಿ ಇಂದು ಪಥಸಂಚಲನ ಮೂಡಿಸುವ ಮೂಲಕ ನಾಗರಿಕರಲ್ಲಿ ಆತ್ಮಸ್ಥೈರ್ಯವನ್ನು ತುಂಬುವ ಪ್ರಯತ್ನ ಮಾಡಿತು.

ಹೌದು.. ನಗರದಲ್ಲಿ ಉತ್ತರ ಸಂಚಾರ ವಿಭಾಗದ ಎಸಿಪಿ ವಿನೋದಕುಮಾರ ಮುಕ್ತೆದಾರ ನೇತೃತ್ವದಲ್ಲಿ ಎರಡು ಮಾರ್ಗವಾಗಿ ಪಥ ಸಂಚಲನ ನಡೆಸಲಾಯಿತು. ಒಂದು ಮಾರ್ಗ ದೇವಾಂಗಪೇಟೆ, ಸಿಲ್ವರ್ ಪಾರ್ಕ್, ಮಸೂತಿ ಓಣಿ, ಗೊಪ್ಪನಕೊಪ್ಪ, ರಮೇಶಭವನ, ಸರ್ವೋದಯ ಸರ್ಕಲ್ ವರೆಗೆ ನಡೆಸಿದರೇ ಮತ್ತೊಂದು ಗಿರಣಿಚಾಳ, ಗವಿ ಓಣಿ, ಕೌಲಪೇಟೆ, ಡಾಕಪ್ಪಾ ಸರ್ಕಲ್, ಮುಲ್ಲಾ ಮಸೂತಿ ಓಣಿ, ಕಾಳಮ್ಮನ ಅಗಸಿ ಮಾರ್ಗವಾಗಿ ನಡೆಯಿತು. ಈ ಪಥಸಂಚಲನದಲ್ಲಿ ಶಸ್ತ್ರಸಜ್ಜಿತ ಪೊಲೀಸ್‌ ಸಿಬ್ಬಂದಿ ಸಾಗುವ ಮೂಲಕ ಕಿಡಿಗೇಡಿಗಳಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದರು.

ಪಂಥ ಸಂಚಲನದಲ್ಲಿ ಕೇಶ್ವಾಪುರ ಪೋಲಿಸ್ ಠಾಣೆಯ ಪಿಐ ಜಗದೀಶ್ ಹಂಚಿನಾಳ, ಅಶೋಕನಗರ ಠಾಣೆಯ ಪಿಐ ಅರುಣಕುಮಾರ ಸೋಳಂಕಿ, ಉಪನಗರ ಠಾಣೆ ಪಿಐ ಡಿ.ರವಿಚಂದ್ರನ್, ಕಮರಿಪೇಟೆ ಠಾಣೆ ಪಿಐ ಜಾದವ್ ಸೇರಿದಂತೆ ಇನ್ನಿತರ ಸಿಬ್ಬಂದಿ ವರ್ಗ ಇದ್ದರು.

Edited By : Nagesh Gaonkar
Kshetra Samachara

Kshetra Samachara

11/02/2022 04:08 pm

Cinque Terre

20.5 K

Cinque Terre

0

ಸಂಬಂಧಿತ ಸುದ್ದಿ