ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯಲ್ಲಿ ಫುಟ್‌ಪಾತ್‌ ಒತ್ತುವರಿ ತೆರವು, ಸಾಮಗ್ರಿ ಜಪ್ತಿ

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಹಾಗೂ ನಗರ ಸಂಚಾರ ಪೊಲೀಸರು‌ ಜನತಾ ಬಜಾರ್, ಚನ್ನಮ್ಮ ವೃತ್ತ ಅಕ್ಕಪಕ್ಕದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಫುಟ್‌ಪಾತ್‌ಗಳನ್ನು ಆಕ್ರಮಿಸಿಕೊಂಡು ವ್ಯಾಪಾರ ನಡೆಸುತ್ತಿದ್ದವರನ್ನು ತೆರವುಗೊಳಿಸಿದರು.

ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿ ಅಂಗಡಿ ಇಟ್ಟಿರುವುದು, ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಿಕೊಂಡಿರುವುದು, ಹಣ್ಣು ಮತ್ತು ಹೂ, ತರಕಾರಿ ವ್ಯಾಪಾರ ಮಾಡಲು ಪೆಟ್ಟಿಗೆ ಅಂಗಡಿಗಳನ್ನು ಫುಟ್‌ಪಾತ್‌ನಲ್ಲೇ ಅಳವಡಿಸಿಕೊಂಡಿರುವುದನ್ನು ತೆರವುಗೊಳಿಸಲಾಯಿತು.

ಕಾರ್ಯಾಚರಣೆ ವೇಳೆ ಪೂರ್ವ ಸಂಚಾರಿ ಠಾಣೆಯ ಇನ್ಸ್‌ಪೆಕ್ಟರ್ ನಾಗರಾಜ್ ಕಾಡದೇವರಮಠ, ಪಿಎಸ್ಐ ಶರಣ ದೇಸಾಯಿ, ಪಾಲಿಕೆ‌ ಅಧಿಕಾರಿಗಳು ಸೇರಿದಂತೆ ಇನ್ನಿತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

28/01/2022 10:58 pm

Cinque Terre

35.36 K

Cinque Terre

9

ಸಂಬಂಧಿತ ಸುದ್ದಿ