ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಹೆಚ್ಚಿನ ಪರಿಹಾರ ಪಡೆದ ಭೂ ಮಾಲೀಕನಿಗೆ ಹಣ ಮರಳಿ ಕಟ್ಟುವಂತೆ ಸೂಚನೆ ನೀಡಿದ ಕೋರ್ಟ್

ಧಾರವಾಡ: ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಹೆಚ್ಚಿನ ಪರಿಹಾರ ಪಡೆದ ವ್ಯಕ್ತಿಯೊಬ್ಬರಿಗೆ, ಪಡೆದ ಹೆಚ್ಚಿನ ಹಣವನ್ನು ಸರ್ಕಾರಕ್ಕೆ ಮರು ಪಾವತಿ ಮಾಡುವಂತೆ ಧಾರವಾಡದ ಎರಡನೇ ಹೆಚ್ಚುವರಿ ನ್ಯಾಯಾಲಯ ಆದೇಶ ನೀಡಿದೆ. ಎರಡು ತಿಂಗಳ ಒಳಗಾಗಿ ಹಣವನ್ನು ಸರ್ಕಾರಕ್ಕೆ ಪಾವತಿ ಮಾಡಬೇಕು ಇಲ್ಲದೆ ಹೋದರೆ ಕಾನೂನಿನ ಮೂಲಕ ಆ ವ್ಯಕ್ತಿಯಿಂದ ಹಣ ಪಾವತಿ ಮಾಡಿಸಿಕೊಳ್ಳಬಹುದು ಎಂದು ನ್ಯಾಯಾಲಯ ಸೂಚಿಸಿದೆ.

1989ರಲ್ಲಿ ಹುಬ್ಬಳ್ಳಿಯ ಹೊಸೂರಿನಿಂದ ಗೋಕುಲ ರಸ್ತೆಯವರೆಗೆ ರಸ್ತೆ ಅಗಲೀಕರಣಕ್ಕಾಗಿ ಲೋಕೋಪಯೋಗಿ ಇಲಾಖೆಯು ಜಿತೋರೆ ಎಂಬುವವರಿಂದ ಜಾಗವನ್ನು ಸ್ವಾಧೀನಪಡಿಸಿಕೊಂಡಿತ್ತು. ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರವಾಗಿ ಜಿತೋರೆ ಅವರಿಗೆ ಸರ್ಕಾರ ಮೊದಲಿಗೆ 13 ಲಕ್ಷ ಪರಿಹಾರ ನೀಡಿತ್ತು. ಈ ಪರಿಹಾರ ಕಡಿಮೆಯಾಗಿದೆ ಎಂದು ಜಿತೋರೆ ಅವರು ನ್ಯಾಯಾಲಯದ ಮೂಲಕ ಮತ್ತೆ ಒಟ್ಟಾರೆ 22 ಲಕ್ಷ ರೂಪಾಯಿ ಹೆಚ್ಚುವರಿ ಪರಿಹಾರ ಪಡೆದುಕೊಂಡಿದ್ದರು. ಲೋಕೋಪಯೋಗಿ ಇಲಾಖೆಯು ಈ ಮೊತ್ತವನ್ನು ಪಾವತಿಸುವವರೆಗೂ ಭೂ ಮಾಲೀಕರಿಗೆ ಬಡ್ಡಿ ರೂಪದ ಹಣ ಸಂದಾಯ ಮಾಡಬೇಕಾಗುತ್ತದೆ. ಈ ಬಡ್ಡಿ ರೂಪದ ಹಣ ಸಂದಾಯ ಮಾಡುವಲ್ಲಿ ಹೆಚ್ಚಿನ ಪರಿಹಾರ ಭೂ ಮಾಲೀಕರಿಗೆ ಹೋಗಿತ್ತು. ಸದ್ಯ ಇದನ್ನು ಪ್ರಶ್ನಿಸಿ ಎಸಿ ಹಾಗೂ ಲೋಕೋಪಯೋಗಿ ಇಲಾಖೆ ಎಕ್ಸಿಕ್ಯೂಟಿವ್ ಎಂಜಿನಿಯರ್ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ವಿಚಾರಣೆ ನಡೆಸಿದ ನ್ಯಾಯಾಲಯ ಸರ್ಕಾರದಿಂದ 11,89,993 ಹೆಚ್ಚಿನ ಹಣ ಪಡೆದ ಜಿತೋರೆ ಅವರು, ಮರಳಿ ಅದನ್ನು ಸರ್ಕಾರಕ್ಕೆ ಸಂದಾಯ ಮಾಡಬೇಕು ಎಂದು ಆದೇಶ ಹೊರಡಿಸಿದೆ. ಸರ್ಕಾರದ ಪರವಾಗಿ ರಾಜು ಕೋಟಿ ಅವರು ವಾದ ಮಂಡಿಸಿದ್ದರು.

ಎರಡು ತಿಂಗಳ ಒಳಗಾಗಿ ಮೊತ್ತವನ್ನು ಪಾವತಿಸಬೇಕು ಎಂದು ಎರಡನೇ ಹೆಚ್ಚುವರಿ ನ್ಯಾಯಾಲಯ ಈ ಆದೇಶ ಹೊರಡಿಸಿದೆ. ಭೂಮಿ ಕಳೆದುಕೊಂಡ ಮಾಲೀಕರಿಗೆ ಸರ್ಕಾರ ಆದಷ್ಟು ಬೇಗ ಪರಿಹಾರ ನೀಡಬೇಕು ಎಂಬ ಆದೇಶಗಳು ಬರುವುದು ಸಹಜ. ಆದರೆ, ಸರ್ಕಾರದಿಂದ ಹೆಚ್ಚಿನ ಹಣ ಪಡೆದ ಒಬ್ಬ ವ್ಯಕ್ತಿಗೆ, ಮರಳಿ ಆ ಹಣವನ್ನು ಸರ್ಕಾರಕ್ಕೆ ಪಾವತಿ ಮಾಡುವಂತೆ ನ್ಯಾಯಾಲಯದಿಂದ ಆದೇಶ ಬಂದಿರುವುದು ಗಮನಾರ್ಹ ಸಂಗತಿ.

Edited By : Nagesh Gaonkar
Kshetra Samachara

Kshetra Samachara

22/01/2022 07:50 pm

Cinque Terre

45.66 K

Cinque Terre

0

ಸಂಬಂಧಿತ ಸುದ್ದಿ