ನವಲಗುಂದ : ರಾಜ್ಯ ಸರ್ಕಾರದ ವೀಕೆಂಡ್ ಕರ್ಫ್ಯೂ ಗೆ ನವಲಗುಂದ ಪಟ್ಟಣದಲ್ಲಿ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಅಂಗಡಿ ಮುಂಗಟ್ಟುಗಳಿಗೆ ಬೀಗ ಹಾಕಲಾಗಿತ್ತು. ಇನ್ನು ಅನಾವಶ್ಯಕ ಜನರ ಓಡಾಟಕ್ಕೂ ಪೊಲೀಸ್ ಸಿಬ್ಬಂದಿಯಿಂದ ಬ್ರೇಕ್ ಹಾಕಲಾಗಿತ್ತು.
ಹೌದು ರಾಜ್ಯದಲ್ಲಿ ತುರ್ತು ಸೇವೆಗಳನ್ನು ಹೊರತುಪಡಿಸಿ, ಕಟ್ಟುನಿಟ್ಟಾಗಿ ಜಾರಿ ಮಾಡಿರುವ ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಪಟ್ಟಣದ ಅಂಗಡಿ-ಮುಂಗಟ್ಟುಗಳು ಸೇರಿದಂತೆ ಎಲ್ಲವೂ ಸಹ ಸ್ತಬ್ಧವಾಗಿತ್ತು. ಇನ್ನು ಪ್ರಮುಖ ರಸ್ತೆಗಳಲ್ಲಿ ಪೊಲೀಸರ ಸರ್ಪಗವಾಲು ಮಾಡಲಾಗಿದ್ದು, ಅಗತ್ಯ ಕೆಲಸಗಳ ಮೇಲೆ ಹೊರ ಬಂದ ಜನರ ಸಂಖ್ಯೆ ಕಡಿಮೆ ಇತ್ತು. ಇನ್ನೂ ಅನಗತ್ಯ ವಾಹನ ಸಂಚಾರ ಮತ್ತು ಜನಸಂಚಾರಕ್ಕೆ ಬ್ರೇಕ್ ಹಾಕಿದ ಪೊಲೀಸರು ವಾಹನಗಳ ತಪಾಸಣೆ ಮಾಡುವ ದೃಶ್ಯಗಳು ಕಂಡು ಬಂದವು.
Kshetra Samachara
08/01/2022 11:51 am