ಹುಬ್ಬಳ್ಳಿ: ಓಮೈಕ್ರಾನ್ ವೈರಸ್ ಭೀತಿಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ನೈಟ್ ಕರ್ಫ್ಯೂ ನಿರ್ಧಾರ ಇಂದಿನಿಂದಲೇ ಜಾರಿಯಾಗಲಿದ್ದು, ಈಗಾಗಲೇ ಪೊಲೀಸ್ ಸಿಬ್ಬಂದಿಗಳು ಫೀಲ್ಡ್ ಗೆ ಇಳಿದಿದ್ದಾರೆ.
ಹೌದು.. ಇಂದಿನಿಂದ ನೈಟ್ ಕರ್ಪ್ಯೂ ಹಿನ್ನಲೆಯಲ್ಲಿ ಒಂದು ಗಂಟೆಗೆ ಮುಂಚೆಯೇ ಫೀಲ್ಡ್‌ಗಿಳಿದ ಪೊಲೀಸರು, ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.
ಬೇಗ ಮನೆ ಸೇರಿಕೊಳ್ಳವಂತೆ ಸೂಚನೆ ನೀಡುತ್ತಿರುವ ಖಾಕಿ ಪಡೆ, ವಾಹನದಲ್ಲಿ ಮೈಕ್ ಮುಖಾಂತರ ಸಂಗೊಳ್ಳಿ ರಾಯಣ್ಣ ವೃತ್ತ, ಕೋರ್ಟ್ ವೃತ್ತ, ದಾಜಿಪಾನಪೇಟ್ ಜನತಾ ಬಜಾರ್ ಅಂಗಡಿ ಮುಂಗ್ಗಟ್ಟುಗಳನ್ನು ಮುಂಚುವಂತೆ ತಾಕೀತು ಮಾಡುತ್ತಿದ್ದಾರೆ.
Kshetra Samachara
28/12/2021 10:00 pm