ಹುಬ್ಬಳ್ಳಿ: ಸರ್ಕಾರ ಒಂದಿಲ್ಲೊಂದು ರೀತಿಯಲ್ಲಿ ನಿರ್ಧಾರವನ್ನು ತೆಗೆದುಕೊಂಡು ಜನರ ಜೀವನದ ಜೊತೆಗೆ ಆಟ ಆಡುತ್ತಿದೆ. ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಹೊಟೇಲ್ ಹಾಗೂ ಉದ್ಯಮಗಳಿಗೆ ಮತ್ತೇ ನೈಟ್ ಕರ್ಫ್ಯೂ ಬರೆ ಎಳೆಯುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ.
ಹೌದು.. ಕಿಲ್ಲರ್ ಕೊರೋನಾ ನಂತರ ಬಂದ ಓಮೈಕ್ರಾನ್ ವೈರಸ್ ಭೀತಿಯಿಂದ ಈಗ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡುತ್ತಿರುವುದು ಸಂಕಷ್ಟದ ಜೀವನಕ್ಕೆ ಮತ್ತೊಂದು ಬರೆ ಏಳೆದಂತಾಗಿದೆ. ಹಾಗಿದ್ದರೇ ನೈಟ್ ಕರ್ಫ್ಯೂ ಬಗ್ಗೆ ಹುಬ್ಬಳ್ಳಿ ಜನರು ಏನು ಹೇಳ್ತಾರೆ ಕೇಳಿ...
ಒಟ್ಟಿನಲ್ಲಿ ಸರ್ಕಾರ ನಿರ್ಧಾರದಿಂದ ಜನಜೀವನಕ್ಕೆ ಎಷ್ಟು ಅನುಕೂಲವಾಗಿದೆಯೇ ಅಷ್ಟೇ ಅನಾನುಕೂಲಗಳಾಗಿವೆ. ಕೆಲಸ ಕಾರ್ಯವಿಲ್ಲದೇ ಜೀವನದ ಬಂಡೆಯನ್ನು ಸಾಗಿಸಲು ಹೆಣಗಾಡುತ್ತಿದ್ದವರಿಗೆ ಈಗ ನೈಟ್ ಕರ್ಫ್ಯೂ ನಿರ್ಧಾರ ಅಸಮಾಧಾನ ಹುಟ್ಟು ಹಾಕಿದೆ. ಜನಾಶೀರ್ವಾದ ಪಡೆಯುವ ಸರ್ಕಾರ ಇಂತಹ ನಿರ್ಧಾರಗಳಿಗೆ ಜನರ ಅಭಿಪ್ರಾಯ ಪಡೆಯದೇ ಇರುವುದು ವಿಪರ್ಯಾಸಕರ ಸಂಗತಿಯಾಗಿದೆ.
Kshetra Samachara
27/12/2021 04:15 pm