ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ನೀರಾವರಿ ಇಲಾಖೆ ಜಾಗದಲ್ಲಿನ ಮನೆಗಳ ತೆರವು ಕಾರ್ಯ

ನವಲಗುಂದ: ಹೈಕೋರ್ಟ್ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಇಂದು ತಾಲೂಕಿನ ತೀರ್ಲಾಪುರ ಗ್ರಾಮದಲ್ಲಿನ ನೀರಾವರಿ ಇಲಾಖೆಯ ಜಾಗದಲ್ಲಿ ಅನಧಿಕೃತವಾಗಿ ಇದ್ದ 45 ಮನೆಗಳನ್ನ ಪೊಲೀಸ್ ಬಿಗಿಬಂದೋಬಸ್ತ್ ನಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು.

ಹೌದು ತೀರ್ಲಾಪುರ ಗ್ರಾಮದ ಬ್ಯಾಹಟ್ಟಿ ರಸ್ತೆಯಲ್ಲಿ ಹಲವು ವರ್ಷಗಳ ಹಿಂದೆ ನೀರಾವರಿ ಇಲಾಖೆಯವರಿಗಾಗಿ ಮನೆಗಳನ್ನ ಕಟ್ಟಲಾಗಿತ್ತು. ಅದೇ ಮನೆಯಲ್ಲಿದ್ದ ಗ್ರಾಮದ ಹಲವರು, ಕಬಳಿಕೆ ಮಾಡಿಕೊಂಡಿದ್ದಲ್ಲದೇ, ಜಾಗವನ್ನ ತಮಗೆ ಬೇಕಾದ ರೀತಿಯಲ್ಲಿ ಉಪಯೋಗಿಸಿಕೊಂಡಿದ್ದರು. ಹೈಕೋರ್ಟ್ ಮನೆಗಳನ್ನು ತೆರವುಗೊಳಿಸಲು ನಿರ್ದೇಶನ ನೀಡಿದ ಹಿನ್ನೆಲೆ ಸುಮಾರು 45 ಮನೆಗಳನ್ನ ತೆರವು ಮಾಡಲಾಯಿತು. ಇದರಿಂದ ಇಲ್ಲಿ ವಾಸವಾಗಿದ್ದ ಜನರು ಸಂಕಷ್ಟಕ್ಕೆ ಸಿಲುಕಿದಂತಾಗಿದೆ.

ಇನ್ನು ಸಂಬಂಧ ಪಟ್ಟ ಅಧಿಕಾರಿಗಳು ಸೇರಿದಂತೆ ನವಲಗುಂದ ಠಾಣೆ ಇನ್ಸಪೆಕ್ಟರ್ ಚಂದ್ರಶೇಖರ ಮಠಪತಿ ಅವರು ಮನೆಗಳನ್ನ ಖಾಲಿ ಮಾಡುವಂತೆ ಜನರಿಗೆ ಮನವರಿಕೆ ಮಾಡಿಕೊಟ್ಟರು.

Edited By : Nagesh Gaonkar
Kshetra Samachara

Kshetra Samachara

08/11/2021 10:17 pm

Cinque Terre

47.02 K

Cinque Terre

2

ಸಂಬಂಧಿತ ಸುದ್ದಿ