ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸೀತಾರಾಮ್‌ ಶೆಟ್ಟಿ ಮನೆಯಲ್ಲಿ ಇನ್ನೂ ನಡೆದಿದೆ ಐಟಿ ಅಧಿಕಾರಿಗಳಿಂದ ಪರಿಶೀಲನೆ

ಧಾರವಾಡ: ಕನಕಪುರ ಬಂಡೆ ಮಾಜಿ ಸಚಿವ ಡಿ.ಕೆ.ಶಿವಕುಮಾರ ಅವರ ಆಪ್ತರಾದ ಯು.ಬಿ.ಶೆಟ್ಟಿ ಅವರ ಸಹೋದರ ಸೀತಾರಾಮ್ ಶೆಟ್ಟಿ ಅವರ ಮನೆ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ರಾತ್ರಿವರೆಗೂ ಸೀತಾರಾಮ್ ಅವರ ಮನೆಯಲ್ಲಿ ತೀವ್ರ ಪರಿಶೀಲನೆ ನಡೆಸಿದ್ದಾರೆ.

ಡಿಕೆಶಿ ಆಪ್ತ ಯು.ಬಿ.ಶೆಟ್ಟಿ ಹಾಗೂ ಸೀತಾರಾಮ್ ಶೆಟ್ಟಿ ಅವರ ಮನೆ ಮೇಲೆ ಗೋವಾ ಮೂಲದ ಐಟಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಸೀತಾರಾಮ್ ಶೆಟ್ಟಿ ಅವರ ಮನೆಗೆ ಬೆಳಿಗ್ಗೆ 8ಕ್ಕೇ ಬಂದ ಅಧಿಕಾರಿಗಳು ರಾತ್ರಿ 8 ಗಂಟೆ ಆದರೂ ಪರಿಶೀಲನೆ ನಡೆಸುವುದನ್ನು ಕೈಬಿಟ್ಟಿರಲಿಲ್ಲ.

ಈ ಇಬ್ಬರೂ ಸಹೋದರರು ಮಾಜಿ ಸಚಿವ ಡಿ.ಕೆ.ಶಿವಕುಮಾರ ಅವರಿಗೆ ಆಪ್ತರು ಎನ್ನಲಾಗಿದೆ. ಗೋವಾ ಮೂಲದ ಐಟಿ ಅಧಿಕಾರಿಗಳೊಂದಿಗೆ ಸ್ಥಳೀಯ ಆದಾಯ ತೆರಿಗೆ ಅಧಿಕಾರಿಗಳೂ ಶೆಟ್ಟಿ ಅವರ ಮನೆಗೆ ಬಂದು ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಐಟಿ ಅಧಿಕಾರಿಗಳು ನಿರಂತರವಾಗಿ ಡ್ರಿಲ್ ನಡೆಸುತ್ತಿದ್ದಾರೆ. ನಿದ್ರೆಯ ಮಂಪರಿನಲ್ಲಿದ್ದ ಶೆಟ್ಟಿ ಸಹೋದರರಿಗೆ ಅಧಿಕಾರಿಗಳು ಬೆಳ್ಳಂಬೆಳಿಗ್ಗೆ ಶಾಕ್ ನೀಡಿದ್ದಂತೂ ಸುಳ್ಳಲ್ಲ.

Edited By : Nagesh Gaonkar
Kshetra Samachara

Kshetra Samachara

28/10/2021 07:54 pm

Cinque Terre

21.94 K

Cinque Terre

1

ಸಂಬಂಧಿತ ಸುದ್ದಿ