ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ ಜಿಲ್ಲಾ ಕಸಾಪ ಚುನಾವಣಾ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿದ ಹೈಕೋರ್ಟ್

ಧಾರವಾಡ: ಧಾರವಾಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣಾ ಪ್ರಕ್ರಿಯೆಗೆ ಧಾರವಾಡ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಈ ಕುರಿತು ಧಾರವಾಡ ಜಿಲ್ಲೆಯ ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಹಾಗೂ ಪತ್ರಕರ್ತ ನಾಗರಾಜ ಕಿರಣಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಕಕ್ಷಿದಾರರ ಪರ ಹಿರಿಯ ವಕೀಲರಾದ ಎ.ಆರ್.ಪಾಟೀಲ ವಾದ ಮಂಡಿಸಿದ್ದರು.

ಎಸ್.ಎಚ್.ಪಾಟೀಲ ಎನ್ನುವವರು ಈ ಹಿಂದೆ ಡಾ.ಲಿಂಗರಾಜ ಅಂಗಡಿ ಅವರ ನಾಮಪತ್ರ ತಿರಸ್ಕರಿಸುವಂತೆ ಹಲವು ಬಾರಿ ಕೇಂದ್ರ ಚುನಾವಣಾಧಿಕಾರಿ ಹಾಗೂ ಧಾರವಾಡ ಜಿಲ್ಲೆಯ ಚುನಾವಣಾ ಅಧಿಕಾರಿಗೆ ಪತ್ರ ಬರೆದಿದ್ದರು. ಆದರೆ, ಅದನ್ನು ಚುನಾವಣಾಧಿಕಾರಿಗಳು ಪುರಸ್ಕರಿಸಿರಲಿಲ್ಲ.

ಹೀಗಾಗಿ ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಜೊತೆಗೆ ಡಾ.ಲಿಂಗರಾಜ ಅಂಗಡಿ ಅವರು ಕಸಾಪ ನಿಯಮಾವಳಿ ಗಾಳಿಗೆ ತೂರಿ ಎರಡು ಬಾರಿ ಅಧ್ಯಕ್ಷರಾಗಿದ್ದಲ್ಲದೇ, ಮೂರನೇ ಅವಧಿಗೆ ಸ್ಪರ್ಧಿಸಿದ್ದರು. ಇದು ಕಸಾಪ ನಿಯಮಾವಳಿ ಸ್ಪಷ್ಟವಾಗಿ ಉಲ್ಲಂಘನೆ ಆಗಿದೆ‌

ಇದಲ್ಲದೇ ಕಸಾಪ ನಿಯಮಾವಳಿ ಪ್ರಕಾರ ಉಪವಿಭಾಗಾಧಿಕಾರಿ ಅಥವಾ ಅದಕ್ಕಿಂತ ಮೇಲಿನ ಅಧಿಕಾರಿಗಳನ್ನು ನೇಮಿಸಬೇಕು ಎಂಬ ನಿಯಮವಿದೆ. ಆದರೆ ಕಸಾಪ ಧಾರವಾಡ ಜಿಲ್ಲೆಯ ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಅವರನ್ನು ನೇಮಿಸಿದೆ. ಇದು ಕೂಡ ಸರಿಯಲ್ಲ ಎಂದು ಹೈಕೋರ್ಟ್ ಗಮನ ಸೆಳೆದಿದ್ದರು.

ಕಕ್ಷಿದಾರರ ವಾದ ಪುರಸ್ಕರಿಸಿದ ಧಾರವಾಡ ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ ಅವರಿದ್ದ ಏಕಸದಸ್ಯ ಪೀಠ ಚುನಾವಣಾ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿ ಮಹತ್ವದ ಆದೇಶ ಹೊರಡಿಸಿದೆ.

Edited By : Nagesh Gaonkar
Kshetra Samachara

Kshetra Samachara

27/10/2021 08:42 pm

Cinque Terre

19.98 K

Cinque Terre

0

ಸಂಬಂಧಿತ ಸುದ್ದಿ