ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳೇಹುಬ್ಬಳ್ಳಿ ಠಾಣೆ ಇನ್ಸ್ಪೆಕ್ಟರ್ ಶಿವಾನಂದ ಕಮತಗಿ ಅವರಿಗೆ ಗೃಹ ಇಲಾಖೆಯ ಪ್ರಶಸ್ತಿ

ಹುಬ್ಬಳ್ಳಿ- ವಾಣಿಜ್ಯ ನಗರಿಯಲ್ಲಿ ಹಾಡುಹಗಲೇ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಡೆಸಿದ ತನಿಖೆಯೊಂದರಲ್ಲಿ ಪ್ರತಿಯೊಂದು ಆರೋಪಿಗಳನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದ, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಶಿವಾನಂದ ಕಮತಗಿಯವರ ಕಾರ್ಯಕ್ಕೆ ಗೃಹ ಇಲಾಖೆಯ ಪ್ರಶಸ್ತಿ ಲಭ್ಯವಾಗಿದೆ.

ಹೌದು... ಕಾನೂನು ಪಾಲನೆಯಲ್ಲಿ ಅತ್ಯುತ್ತಮ ತನಿಖೆಯನ್ನ ಮಾಡಿದ, ರಾಜ್ಯದ ಆರು ಪೊಲೀಸ್ ಅಧಿಕಾರಿಗಳಿಗೆ ಕೇಂದ್ರದ ಪ್ರಶಸ್ತಿ ಲಭಿಸಿದ್ದು, ಅದರಲ್ಲಿ ಪ್ರಮುಖವಾಗಿ ಹಳೇಹುಬ್ಬಳ್ಳಿ ಠಾಣೆ ಇನ್ಸಪೆಕ್ಟರ್ ಶಿವಾನಂದ ಕಮತಗಿ ಅವರಿಗೂ ಪ್ರಶಸ್ತಿ ಲಭಿಸಿದೆ. ಮಂಗಳೂರಿನ ಡಿವೈಎಸ್ಪಿ ಪರಮೇಶ್ವರ ಅನಂತ ಹೆಗಡೆ, ಬೆಂಗಳೂರಿನ ಸಿಸಿಬಿಯಲ್ಲಿರುವ ಎಸಿಪಿ ಎಚ್.ಎನ್.ಧರ್ಮೆಂದ್ರ, ಬೆಂಗಳೂರಿನ ಬಿಡಿಎ ಎಸ್ ಟಿಎಫ್ ಡಿವೈಎಸ್ಪಿ ಸಿ.ಬಾಲಕೃಷ್ಣ, ಬೆಂಗಳೂರು ಕೆಎಲ್ಎ ಎಸ್ಐಟಿಯ ಪೊಲೀಸ್ ಇನ್ಸಪೆಕ್ಟರ್ ಮನೋಜ ಹೋವಲೆ, ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಸರ್ಕಲ್ ಇನ್ಸಪೆಕ್ಟರ್ ಟಿ.ವಿ.ದೇವರಾಜ ಹಾಗೂ ಹಳೇಹುಬ್ಬಳ್ಳಿ ಠಾಣೆಯ ಇನ್ಸಪೆಕ್ಟರ್ ಶಿವಾನಂದ ಕಮತಗಿ ಅವರಿಗೆ ಈ ಅವಾರ್ಡ್ ದೊರೆತಿದ್ದು ಹುಬ್ಬಳ್ಳಿ ಜನರು ಅಭಿನಂದನೆ ಸಲ್ಲಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

12/08/2021 02:56 pm

Cinque Terre

42.34 K

Cinque Terre

18

ಸಂಬಂಧಿತ ಸುದ್ದಿ