ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ನಮ್ಮ ಮೇಲಿನ ಆರೋಪ ಸುಳ್ಳು: ಪ್ರತಿಭಟನೆಗಿಳಿದ ವೈದ್ಯರು

ಧಾರವಾಡ: ತಮ್ಮ ಮೇಲೆ ಸುಳ್ಳು ಆರೋಪ ಮಾಡಿ ಡಿಮಾನ್ಸ್ ಆಸ್ಪತ್ರೆಯ ಹೆಸರು ಕೆಡಿಸಲಾಗುತ್ತಿದೆ ಎಂದು ಆರೋಪಿಸಿ ಮಾನಸಿಕ ಆರೋಗ್ಯ ಸಂಸ್ಥೆಯ ವೈದ್ಯರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಆಸ್ಪತ್ರೆಯಲ್ಲಿ ಪ್ರತಿಭಟನೆ ನಡೆಸಿದರು.ಸುಖಾಸುಮ್ಮನೆ ಆಸ್ಪತ್ರೆಯ ವೈದ್ಯರ ಮೇಲೆ ದೂರು ದಾಖಲಿಸಿ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ವೈದ್ಯರು ಆರೋಪಿಸಿದ್ದಾರೆ.

ಸೆಲ್ವಿ ಎಂಬಾಕೆ ತನ್ನ ಆರೋಗ್ಯ ಸರಿಯಿದ್ದರೂ ಸಹ ಮಾನಸಿಕ ಖಿನ್ನತೆಗೊಳಗಾಗಿದ್ದಾಳೆ ಎಂದು ಆಕೆಯನ್ನು 16 ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತಂತೆ. ವೈದ್ಯರ ಕ್ರಮ ಪ್ರಶ್ನಿಸಿ ಸೆಲ್ವಿ ಪರ ವಕೀಲರು ಕೋರ್ಟ್ ಮೆಟ್ಟಿಲೆರಿದ್ದರು. ಕೋರ್ಟ್ ಆದೇಶದಂತೆ ಸೆಲ್ವಿಯನ್ನು ಮೊನ್ನೆ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಆದರೆ ಸೆಲ್ವಿ ಇದೀಗ ವೈದ್ಯರ ಮೇಲೆ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಡಿಮಾನ್ಸ್ ನಿರ್ದೇಶಕ ಡಾ. ಮಹೇಶ ದೇಸಾಯಿ, ವೈದ್ಯಾಧಿಕಾರಿಗಳಾದ ರಾಘವೇಂದ್ರ ನಾಯಕ ಹಾಗೂ ರಂಗನಾಥ ಕುಲಕರ್ಣಿ ಎಂಬುವವರ ಮೇಲೆ ಸೆಲ್ವಿ ದೂರು ದಾಖಲಿಸಿದ್ದಾರೆ. ಇನ್ನು ದೂರು ದಾಖಲಾಗುತ್ತಿದ್ದಂತೆ ಡಿಮಾನ್ಸ್ ಸಿಬ್ಬಂದಿ ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ತಮ್ಮ ಮೇಲಿನ ಆರೋಪ ಸುಳ್ಳು ಎಂದು ಪ್ರತಿಭಟಿಸಿದರು. ವಿನಾ ಕಾರಣ ಆಸ್ಪತ್ರೆ ಹೆಸರು ಕೆಡಿಸಲಾಗುತ್ತಿದೆ. ಸರ್ಕಾರ ಮಧ್ಯ ಪ್ರವೇಶಿಸಿ ವೈದ್ಯರಿಗೆ ನಿರಾತಂಕವಾಗಿ ಕೆಲಸ ಮಾಡಲು ಅವಕಾಶ ಒದಗಿಸಬೇಕು ಎಂದು ಆಗ್ರಹಿಸಿದರು.

Edited By : Manjunath H D
Kshetra Samachara

Kshetra Samachara

17/02/2021 07:47 pm

Cinque Terre

38.89 K

Cinque Terre

1

ಸಂಬಂಧಿತ ಸುದ್ದಿ