ನವಲಗುಂದ : ‘ಒನ್ ಇಂಡಿಯಾ ಒನ್ ನಂಬರ್’ ಘೋಷಣೆಯಡಿ ದೇಶ ವ್ಯಾಪ್ತಿ ತುರ್ತು ಸ್ಪಂದನೆಗೆ ಒಂದೇ ಸಹಾಯವಾಣಿ ಸಂಖ್ಯೆ ಆರಂಭಿಸಲಾಗಿದ್ದು, ಈಗಾಗಲೇ ಡಯಲ್ 112 ಚಾಲ್ತಿಯಲ್ಲಿ ಇದೆ. ಈ ಹಿನ್ನಲೆ ಇಂದು ನವಲಗುಂದ ತಾಲೂಕಿನ ತಡಹಾಳ ಗ್ರಾಮದಲ್ಲಿ ಕೌಟುಂಬಿಕ ಕಲಹ ನಡೆಯುವ ಮಾಹಿತಿಯನ್ನು ಈ ಸಂಖ್ಯೆಯಿಂದ ತಿಳಿದು ಬಂದಿದ್ದು, ಸ್ಥಳಕ್ಕೆ EMERGENCY RESCUE VEHICLE-3 ಭೇಟಿ ನೀಡಿ ಸಮಸ್ಯೆ ಬಗೆ ಹರಿಸಿದ್ದಾರೆ.
ಇನ್ನು ಇಂದು ಮಧ್ಯಾಹ್ನ 12:55 ರ ಸುಮಾರಿಗೆ ಕೌಟುಂಬಿಕ ಕಲಹ ಹಿನ್ನೆಲೆ ತಾಲೂಕಿನ ತಡಹಾಳ ಗ್ರಾಮದಿಂದ 112 ಕ್ಕೆ ಕರೆ ಬಂದಿದ್ದು, ಕೂಡಲೇ ಸ್ಥಳಕ್ಕೆ ERV-3 ಅವರು ಹೋಗಿ ಸಮಸ್ಯೆಯನ್ನು ಬಗೆಹರಿಸಿ ಮುಂದಿನ ಕ್ರಮಕ್ಕಾಗಿ ನವಲಗುಂದ ಪೊಲೀಸ್ ಠಾಣೆಗೆ ತಿಳಿಸಲಾಗಿದೆ.
Kshetra Samachara
13/02/2021 07:11 pm