ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸಾಕ್ಷ್ಯ ನಾಶ ವಿಚಾರಣೆ ನಾಳೆಗೆ ಮುಂದೂಡಿಕೆ

ಧಾರವಾಡ: ಧಾರವಾಡದ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್​ ಕುಲಕರ್ಣಿ ಮೇಲಿರುವ ಸಾಕ್ಷ್ಯ ನಾಶ ಪ್ರಕರಣದ ವಿಚಾರಣೆ ಇಂದು ಧಾರವಾಡದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆಯಿತು.

ಸಿಬಿಐ ಪ್ರಕರಣ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗವಣೆಯಾದ ಹಿನ್ನೆಲೆ ಈ ಪ್ರಕರಣವನ್ನೂ ಸಹ ಅದೇ ಕೋರ್ಟ್‌ಗೆ ವರ್ಗಾಯಿಸುವಂತೆ ವಿನಯ್​ ಕುಲಕರ್ಣಿ ಪರ ವಕೀಲರು ನ್ಯಾಯಾಲಯಕ್ಕೆ ಕೋರಿದ ಮೇಲೆ ನ್ಯಾಯಾಧೀಶರು ನಾಳೆಗೆ ಈ ವಿಚಾರಣೆ ಮುಂದೂಡಿದರು.

ಸಿಬಿಐನಿಂದ ಸಾಕ್ಷ್ಯ ನಾಶದ ಕುರಿತು ಪ್ರತ್ಯೇಕ ದೂರು ಸಲ್ಲಿಸಿತ್ತು. ಸಿಬಿಐ ದೂರು ಆಧರಿಸಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ವಿನಯ್​ ಸೇರಿ 8 ಜನರನ್ನು ಆರೋಪಿಗಳೆಂದು ಪರಿಗಣಿಸಲಾಗಿತ್ತು. ವಿನಯ್​ ಕುಲಕರ್ಣಿ ಪ್ರಕರಣದ ಮೊದಲ ಆರೋಪಿಯಾಗಿದ್ದು, ಯೋಗೀಶಗೌಡ ಕೊಲೆ ಬಳಿಕ ಸಾಕ್ಷ್ಯನಾಶ ಮಾಡುವ ಯತ್ನ ನಡೆದಿತ್ತು ಎನ್ನಲಾಗಿದೆ.

Edited By : Vijay Kumar
Kshetra Samachara

Kshetra Samachara

10/02/2021 08:18 pm

Cinque Terre

14.14 K

Cinque Terre

1

ಸಂಬಂಧಿತ ಸುದ್ದಿ