ಧಾರವಾಡ: ಯೋಗೀಶಗೌಡ ಗೌಡರ ಕೊಲೆ ಪ್ರಕರಣದಡಿ ಸಿಬಿಐ ಸರ್ಕಾರಿ ಅಭಿಯೋಜಕಿಯೊಬ್ಬರನ್ನು ವಿಚಾರಣೆಗೆ ಕರೆಯಿಸಿಕೊಂಡಿದೆ.
ಸುಮಿತ್ರಾ ಅಂಚಟಗೇರಿ ಎಂಬ ಸರ್ಕಾರಿ ಅಭಿಯೋಜಕಿ ಹಾಗೂ ಅವರ ಸಹೋದರ ವಿಶ್ವನಾಥ ಯಂಡಿಗೇರಿ ಅವರನ್ನು ಸಿಬಿಐ ಇಂದು ವಿಚಾರಣೆಗೊಳಪಡಿಸಿದೆ.
ಸುಮಿತ್ರಾ ಅವರು ನನ್ನ ತಮ್ಮನ ಕೊಲೆ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಸಹಕಾರ ನೀಡುತ್ತಿಲ್ಲ ಎಂದು ಯೋಗೀಶಗೌಡ ಸಹೋದರ ಗುರುನಾಥಗೌಡ ಆರೋಪಿಸಿದ್ದರು. ಅಲ್ಲದೇ ಈ ಹಿಂದೆ ವಿನಯ್ ಅವರು ಸುಮಿತ್ರಾ ಅವರನ್ನು ಧಾರವಾಡಕ್ಕೆ ವರ್ಗಾಯಿಸುವಂತೆ ಸರ್ಕಾರಕ್ಕೆ ಪತ್ರ ಕೂಡ ಬರೆದಿದ್ದರು. ಈ ಪತ್ರದ ಹಿನ್ನೆಲೆಯಲ್ಲಿ ಸಿಬಿಐ ಇಂದು ಸುಮಿತ್ರಾ ಅವರನ್ನು ವಿಚಾರಣೆಗೊಳಪಡಿಸಿದೆ.
ಇನ್ನು ವಿನಯ ಕುಲಕರ್ಣಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಸುಮಿತ್ರಾ ಅವರ ಅಣ್ಣ ವಿಶ್ವನಾಥ ಯಂಡಿಗೇರಿ ಅವರನ್ನೂ ಸಿಬಿಐ ಇಂದು ವಿಚಾರಣೆಗೊಳಪಡಿಸಿದೆ.
Kshetra Samachara
22/01/2021 10:14 am