ಧಾರವಾಡ: ಧಾರವಾಡದ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಸಂಕ್ರಾಂತಿ ಹಬ್ಬವನ್ನು ಜೈಲಲ್ಲೇ ಆಚರಿಸುವಂತಾಗಿದೆ.
ಕಳೆದ ಎರಡೂವರೆ ತಿಂಗಳಿನಿಂದ ಸೆರೆವಾಸ ಅನುಭವಿಸುತ್ತಿರುವ ವಿನಯ್ ಅವರು ದೀಪಾವಳಿ ಹಬ್ಬ, ಹೊಸ ವರ್ಷಾಚರಣೆಯನ್ನು ಜೈಲಲ್ಲೇ ಆಚರಣೆ ಮಾಡುವಂತಾಯಿತು. ಇದೀಗ ಸಂಕ್ರಾಂತಿ ಹಬ್ಬವನ್ನೂ ಜೈಲಲ್ಲೇ ಆಚರಣೆ ಮಾಡುವಂತಾಗಿದೆ.
ಜಾಮೀನು ಕೋರಿ ವಿನಯ್ ಪರ ವಕೀಲರು ಧಾರವಾಡದ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಇಂದು ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಅರ್ಜಿಯ ವಿಚಾರಣೆಯನ್ನು ಜ.20ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ.
Kshetra Samachara
13/01/2021 02:10 pm