ಧಾರವಾಡ: ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಮಾಡಿದ್ದು, ಅದರಲ್ಲಿನ ಕೆಲವೊಂದಿಷ್ಟು ಕಾನೂನುಗಳು ರೈತರಿಗೆ ತೊಡಕಾಗಿವೆ. ಇದಕ್ಕೆ ತಾಜಾ ಉದಾಹರಣೆಯೊಂದು ಧಾರವಾಡದಲ್ಲಿ ನಡೆದಿದೆ.
ಧಾರವಾಡ ತಾಲೂಕಿನ ಮಂಗಳಗಟ್ಟಿ ಗ್ರಾಮದ ಯಲ್ಲಪ್ಪ ಕರೆಶೀರಿ ಎಂಬ ರೈತ ತನ್ನ ಎತ್ತಿನ ಕಾಲಿಗೆ ಪೆಟ್ಟಾಗಿದೆ ಎಂದು ಧಾರವಾಡದ ಜಾನುವಾರು ಮಾರುಕಟ್ಟೆಗೆ ತೆಗೆದುಕೊಂಡು ಬಂದಿದ್ದರು. ಈ ವೇಳೆ ಕೆಲ ಜಾನುವಾರು ವ್ಯಾಪಾರಸ್ಥರು ಈ ಎತ್ತನ್ನು ನಾವು ತೆಗೆದುಕೊಳ್ಳಲು ಬರೋದಿಲ್ಲ. ಗೋಹತ್ಯೆ ನಿಷೇಧ ಆಗಿದೆ. ನಮ್ಮ ಮೇಲೆ ಕೇಸ್ ಆಗುತ್ತದೆ ನೀವು ಡಿಸಿ ಆಫೀಸಿಗೆ ಹೋಗಿ ಪರವಾನಿಗಿ ತೆಗೆದುಕೊಂಡು ಬನ್ನಿ ಎಂದು ಹೇಳಿದ್ದರಿಂದ ಮಂಗಳಗಟ್ಟಿ ಗ್ರಾಮದ ರೈತರು ಆ ಎತ್ತಿನ ಸಮೇತ ಡಿಸಿ ಕಚೇರಿಗೆ ಬಂದು ಡಿಸಿ ಅವರಿಗೆ ಮನವಿ ಸಲ್ಲಿಸಿದರು.
ರೈತರ ಮನವಿ ಸ್ವೀಕರಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಈ ಬಗ್ಗೆ ಪರಿಶೀಲಿಸಿ ವೈದ್ಯರಿಂದ ಪ್ರಮಾಣಪತ್ರ ಕೊಡಿಸಲಾಗುವುದು ಎಂದು ಭರವಸೆ ನೀಡಿದರು. ಪೆಟ್ಟಾದ ಈ ಎತ್ತನ್ನು ಇಟ್ಟುಕೊಳ್ಳಲು ಆಗೋದಿಲ್ಲ. ಈ ರೀತಿ ಕಾನೂನುಗಳನ್ನು ಸಡಿಲಿಕೆ ಮಾಡಿ. ಇಂತಹ ಜಾನುವಾರುಗಳ ಮಾರಾಟಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ರೈತರು ಆಗ್ರಹಿಸಿದರು.
Kshetra Samachara
11/01/2021 02:53 pm