ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೈಲಿನಿಂದ ಹೊರಗೆ ಬರ್ತಾರಾ ವಿನಯ್ ಕುಲಕರ್ಣಿ?

ಧಾರವಾಡ: ಧಾರವಾಡದ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಜೈಲು ಸೇರಿ ಎರಡು ತಿಂಗಳು ಕಳೆದಿದೆ.

ಜಾಮೀನು ಕೋರಿ ವಿನಯ್ ಅವರು ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯ ವಿನಯ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.

ಮತ್ತೆ ವಿನಯ್ ಪರ ವಕೀಲರು ಜಾಮೀನು ನೀಡುವಂತೆ ಧಾರವಾಡದ ಹೈಕೋರ್ಟ್ ಮೆಟ್ಟಲೇರಿದ್ದು, ಈಗಾಗಲೇ ಹೈಕೋರ್ಟ್ ಕೂಡ ಎರಡು ಬಾರಿ ಅರ್ಜಿಯ ವಿಚಾರಣೆ ನಡೆಸಿ ಮುಂದೂಡಿತ್ತು.

ಇಂದು ಮತ್ತೆ ವಿನಯ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ವಿನಯ್ ಅವರಿಗೆ ಜಾಮೀನು ಸಿಗುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.

ಕಳೆದ ಎರಡ್ಮೂರು ದಿನಗಳಿಂದ ವಿನಯ್ ಅವರ ಬೆಂಬಲಿಗರು, ವಿನಯ್ ಅವರಿಗೆ ಜಾಮೀನು ಸಿಗಲಿ ಎಂದು ವಿವಿಧ ದೇವಸ್ಥಾನಗಳಲ್ಲಿ ಪೂಜೆ, ಪುನಸ್ಕಾರ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

Edited By : Nirmala Aralikatti
Kshetra Samachara

Kshetra Samachara

06/01/2021 09:36 am

Cinque Terre

48.94 K

Cinque Terre

2

ಸಂಬಂಧಿತ ಸುದ್ದಿ