ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬಾಕಿ ಕಟ್ಟಿಲ್ಲ ಅಂದ್ರೇ ಸೀಜ್ ಮಾಡ್ತೀವಿ ಎಂದ ಪಾಲಿಕೆ:3.32 ಕೋಟಿ ಬಾಕಿ

ಹುಬ್ಬಳ್ಳಿ: ಅದು ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ. ಆ ಪಾಲಿಕೆಗೆ ಬರಬೇಕಿದ್ದ ಕೋಟ್ಯಂತರ ರೂಪಾಯಿ ಬಾಕಿ‌ ಮೊತ್ತ ಮಾತ್ರ ಸರಿಯಾಗಿ ಸಂದಾಯ ಆಗ್ತಿರಲಿಲ್ಲ. ನೋಟಿಸ್ ನೀಡಿ, ಪ್ರತ್ಯೇಕ ಕ್ರಮ ಕೈಗೊಂಡರು ಕೂಡ ಹಣ ಮಾತ್ರ ಸಂದಾಯ ಆಗ್ತಿಲ್ಲ. ಬಾಕಿ ವಸೂಲಿಗೆ ಮಹಾನಗರ ಪಾಲಿಕೆ ನಿರ್ಧಾರವೊಂದನ್ನು ಕೈಗೆತ್ತಿಕೊಂಡಿದೆ. ಇದರಿಂದ ಬಾಕಿ ತುಂಬದೇ ಇರುವವರಿಗೆ ಬಿಸಿ ಮುಟ್ಟಿಸಿದಂತಾಗಿದೆ.ಅಷ್ಟಕ್ಕೂ ಅಲ್ಲಿ ಆಗಿದ್ದಾದರೂ ಏನು ಬರಬೇಕಾದ ಹಣ ಆದ್ರೂ ಯಾವುದು ಅಂತೀರಾ ಈ ಸ್ಟೋರಿ ನೋಡಿ..

ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಹುಬ್ಬಳ್ಳಿ-ಧಾರವಾಡ ಮಹಾನಗರ. ಈ ಪಾಲಿಕೆ ಸ್ಟಾಲೇಜ್ ಫೀ ಪಾವತಿ ಮಾಡದೇ ಇರುವ ತನ್ನ ಒಡೆತನದ ವಾಣಿಜ್ಯ ಮಳಿಗೆಗಳ ಬಾಡಿಗೆದಾರರಿಗೆ ಹು-ಧಾ ಮಹಾನಗರ ಪಾಲಿಕೆ ಅಧಿಕಾರಿಗಳು ಬಿಸಿ ಮುಟ್ಟಿಸಲು ಆರಂಭಿಸಿದೆ.2020-21ನೇ ಸಾಲಿನ ಸ್ಟಾಲೇಜ್ ಫೀ ಸಂಗ್ರಹದಲ್ಲಿ ಪಾಲಿಕೆ ಬಹಳ ಹಿಂದುಳಿದಿದೆ. ಪ್ರಸಕ್ತ ಆರ್ಥಿಕ ವರ್ಷದ 9ನೇ ತಿಂಗಳು ಕಳೆಯುತ್ತ ಬಂದರೂ ಸ್ಟಾಲೇಜ್ ಫೀ ಸಂಗ್ರಹದಲ್ಲಿ ಶೇ 50 ರಷ್ಟು ಕೂಡ ಪ್ರಗತಿಯಾಗಿಲ್ಲ. ಹೀಗಾಗಿ ಸ್ಟಾಲೇಜ್ ಫೀ ಸಂದಾಯ ಮಾಡದೇ ಇರುವ ವಾಣಿಜ್ಯ ಮಳಿಗೆಗಳನ್ನು ಸೀಜ್ ಮಾಡಲಾಗುತ್ತಿದೆ. ಬರುವ ಮಾರ್ಚ್ ಅಂತ್ಯದವರೆಗೆ ಸ್ಟಾಲೇಜ್ ಶುಲ್ಕದಿಂದ 6.10 ಕೋಟಿ ರೂಪಾಯಿ ಸಂಗ್ರಹವಾಗಬೇಕಿದೆ. ಡಿ.24ರ ವರೆಗೆ 2.78 ಕೋಟಿ ಸಂಗ್ರಹವಾಗಿದೆ..

ಮಹಾನಗರ ಪಾಲಿಕೆಯು ಸಾಕಷ್ಟು ಯೋಜನೆಯನ್ನು ಹಾಕಿಕೊಂಡಿದೆ. ಸರಿಯಾದ ರೀತಿಯಲ್ಲಿ ಬಾಕಿ ಮೊತ್ತ ಪಾವತಿಯಾಗದೇ ಇರುವುದರಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಈಗಾಗಲೇ 45.54 ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದ್ದು,ಶುಲ್ಕ ಪಾವತಿಸಿದ ವಾಣಿಜ್ಯ ಮಳಿಗೆಗಳನ್ನು ಸೀಜ್ ಮಾಡಲಾಗುತ್ತಿದೆ. ಈಗಾಗಲೇ 35 ಸ್ಟಾಲೇಜ್ ಗಳನ್ನು ಸೀಜ್ ಮಾಡಲಾಗಿದೆ. ಈ ಕಾರ್ಯಾಚರಣೆ ಮುಂದಿನ ದಿನಗಳಲ್ಲಿ ವೇಗ ಪಡೆದುಕೊಳ್ಳಲಿದ್ದು,ಬಾಕಿ‌ ಮೊತ್ತ ಪಾವತಿಸಿದ ಬಾಡಿಗೆದಾರರಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಬಿಸಿ ಮುಟ್ಟಿಸಿದೆ.ಹೌದು.ಬರುವ ಮಾರ್ಚ್ ಅಂತ್ಯದವರೆಗೆ ಸ್ಟಾಲೇಜ್ ಶುಲ್ಕದಿಂದ 6.10 ಕೋಟಿ ರೂಪಾಯಿ ಸಂಗ್ರಹವಾಗಬೇಕಿದೆ. ಆದರೆ ಡಿ.24ರ ವರೆಗೆ 2.78 ಕೋಟಿ ಸಂಗ್ರಹವಾಗಿದ್ದು, 3.32 ಕೋಟಿ ಬಾಕಿ ಇದೆ.

ಅವಳಿನಗರದ ಒಡೆತನದಲ್ಲಿ ಎರಡು ಸಾವಿರಕ್ಕೂ ಅಧಿಕ ವಾಣಿಜ್ಯ ಮಳಿಗೆಗಳಿವೆ. ಮಾಸಿಕ ಬಾಡಿಗೆ ಮೇಲೆ ಮಳಿಗೆ ಪಡೆದವರು ವರ್ಷದ 12 ತಿಂಗಳ ಬಾಡಿಗೆಯನ್ನು ತಪ್ಪಿದ್ದಲ್ಲಿ ಪ್ರತಿ ತಿಂಗಳಿಗೆ ಶೇ.1.5ರಷ್ಟು ದಂಡ ವಿಧಿಸಲಾಗುತ್ತದೆ. ದಂಡ ತಪ್ಪಿಸಿಕೊಳ್ಳಲು ಬಹಳಷ್ಟು ಜನ ಏಪ್ರಿಲ್ ತಿಂಗಳಲ್ಲಿಯೇ ಸ್ಟಾಲೇಜ್ ಫೀ ಪಾವತಿಸಿರುತ್ತಾರೆ. ಒಟ್ಟಿನಲ್ಲಿ ಈಗ ಪಾಲಿಕೆ ಮಾಡಿದ ಕೆಲಸದಿಂದ ಹೆಚ್ಚಿನ ಆದಾಯ ಸಂದಾಯವಾಗತ್ತಿದೆ.

Edited By : Nagesh Gaonkar
Kshetra Samachara

Kshetra Samachara

02/01/2021 06:29 pm

Cinque Terre

116.32 K

Cinque Terre

14

ಸಂಬಂಧಿತ ಸುದ್ದಿ