ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಗಣಪತಿ ವಿಸರ್ಜನೆಗೆ ಖಾಕಿ ಕಣ್ಗಾವಲು; ಮೂರು ಸಾವಿರ ಸಿಬ್ಬಂದಿ ನಿಯೋಜನೆ

ಹುಬ್ಬಳ್ಳಿ: ರಾಜ್ಯದ ಜನತೆಯ ಕುತೂಹಲಕ್ಕೆ ಕಾರಣವಾಗಿರುವ ಹುಬ್ಬಳ್ಳಿ ಗಣೇಶ ವಿಸರ್ಜನೆಯು ಇಂದು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕೂಡ ಅವಳಿನಗರದಲ್ಲಿ ಸಾಕಷ್ಟು ಬಂದೋಬಸ್ತ್ ಮುಂದಾಗಿದ್ದು, ಮೂರು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ವಾಣಿಜ್ಯ ನಗರಿಯಲ್ಲಿ ಠಿಕಾಣಿ ಹೂಡಿದ್ದಾರೆ.

ಅವಳಿನಗರದ ವ್ಯಾಪ್ತಿಯಲ್ಲಿ ಒಟ್ಟಾರೆ 2 ಸಾವಿರಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದಾರೆ. ಇದರ ಜೊತೆಗೆ ಈ ವರ್ಷ 1 ಸಾವಿರಕ್ಕೂ ಹೆಚ್ಚು ಹೊರಗಿನಿಂದ ಪೊಲೀಸ್ ಸಿಬ್ಬಂದಿ ಕರೆಸಲಾಗುತ್ತಿದೆ. 1 ಆರ್ ಎ ಎಫ್ ಪಡೆ, 410 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ, 400 ಹೋಮ್ ಗಾರ್ಡ್ ಕರೆಸಲಾಗುತ್ತಿದೆ. ಅವಳಿನಗರದಲ್ಲಿ 2 ಕೆ ಎಸ್ ಆರ್ ಪಿ ಪಡೆ ಇದ್ದು, ಒಟ್ಟಾರೆ 9 ಕೆ ಎಸ್ ಆರ್ ಪಿ ಪಡೆ, 6 ಸಿಎಆರ್ ಪಡೆ ಕಾರ್ಯ ನಿರ್ವಹಿಸಲಿವೆ. ಸದ್ಯ 3 ಡಿಸಿಪಿ, 4 ಎಸಿಪಿ ಹಾಗೂ 25 ಇನ್ಸಪೆಕ್ಟರ್ ಸೇರಿ ಹೊರಗಿನಿಂದ ಅಧಿಕಾರಿಗಳು, ಡಿಸಿಪಿ,ಎಸಿಪಿ, ಪಿಎಸ್ಐಗಳು ಈ ತಂಡ ಸೇರಲಿದ್ದಾರೆ.

ಅವಳಿನಗರದಲ್ಲಿ ಗಣೇಶೋತ್ಸವ ವಿಸರ್ಜನೆಗೆ ಸಂಬಂಧಪಟ್ಟಂತೆ ಇಂದಿರಾ ಗ್ಲಾಸ್ ಹೌಸ್ ಹತ್ತಿರದ ಭಾವಿ, ಹೊಸೂರು ಭಾವಿ, ಉಣಕಲ್ ಕೆರೆ, ಸಂತೋಷನಗರ ಕೆರೆ, ಸೋನಿಗಾಂಧಿನಗರ, ರೇಣಾಕಾದೇವಿ ಮಂದಿರ, ಜಂಗ್ಲಿಪೇಟೆ, ಈಶ್ವರನಗರ, ಆನಂದನಗರ, ರಾಯನಾಳ, ಉದಯನಗರ ಭಾವಿ ಹಾಗೂ ಧಾರವಾಡದ ಮುಚ್ಚಳಂಬಿ ಭಾವಿ ಸುತ್ತಮುತ್ತ ವಿಸರ್ಜನೆ ದಿನಗಳಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಹಾಕಲಾಗುತ್ತಿದೆ. ವಿಶೇಷವಾಗಿ ಭಾವಿ ಸುತ್ತಮುತ್ತ ಲೈಟ್ ವ್ಯವಸ್ಥೆ, ಸಿಸಿಟಿವಿ, ಅಗ್ನಿಶಾಮಕ ದಳ, ಈಜು ಸಿಬ್ಬಂದಿ ನೇಮಿಸಲಾಗುತ್ತಿದೆ. ವಿಶೇಷವಾಗಿ ಸಾರ್ವಜನಿಕ ಗಣೇಶ ಮೂರ್ತಿಗಳು ಇಂದಿರಾ ಗ್ಲಾಸ್ ಹೌಸ್ ಬಳಿ ಬರುವುದರಿಂದ ಅಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ.

Edited By :
Kshetra Samachara

Kshetra Samachara

09/09/2022 07:01 pm

Cinque Terre

25.74 K

Cinque Terre

0

ಸಂಬಂಧಿತ ಸುದ್ದಿ