ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ ಬ್ರೇಕಿಂಗ್ ನ್ಯೂಸ್: ಈದ್ಗಾ ಮೈದಾನದಲ್ಲಿ ತರಾತುರಿಯಾಗಿ ನೆರವೇರಿದ ಗಣೇಶ ಪ್ರತಿಷ್ಠಾಪನೆ

ಹುಬ್ಬಳ್ಳಿ: ಹುಬ್ಬಳ್ಳಿ ಈದ್ಗಾ ಮೈದಾನದ ಗಣೇಶೋತ್ಸವ ಆಚರಣೆ ವಿಚಾರ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ತಡರಾತ್ರಿ ಹೈಕೋರ್ಟ್ ನೀಡಿದ ಆದೇಶ ಪ್ರಶ್ನಿಸಿ ಅಂಜುಮನ್ ಇಸ್ಲಾಂ ಸಂಸ್ಥೆ ಸುಪ್ರೀಂ ಮೆಟ್ಟಿಲು ಏರಿದೆ.

ಹೀಗಾಗಿ ಗಣೇಶ ಮಂಡಳಿ ತರಾತುರಿಯಲ್ಲಿ ಈದ್ಗಾ ಮೈದಾನದ ನಿಗದಿತ ಸ್ಥಳದಲ್ಲಿ ಚಿಕ್ಕ ಮೂರ್ತಿ ಹಾಗೂ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದೆ. ಮಧ್ಯಾಹ್ನ 12 ಗಂಟೆಗೆ ಮೂರುಸಾವಿರ ಮಠದಿಂದ ಮೂಲಕ ಗಣೇಶ ಮೂರ್ತಿ ತೆಗೆದುಕೊಂಡು ಬಂದು ಪ್ರತಿಷ್ಠಾಪಿಸುವ ಯೋಜನೆ ಇತ್ತು. ಆದರೆ ಅಂಜುಮನ್ ಸಂಸ್ಥೆ ಸುಪ್ರೀಂ ಮೊರೆ ಕಾರಣದಿಂದ ಸಮಯ ಬದಲಾಗಿ ಬೆಳಗ್ಗೆ 7:30ಕ್ಕೆ ಗಣೇಶನ ಪ್ರತಿಷ್ಠಾಪನೆ ಮಾಡಲಾಗಿದೆ.

ಈದ್ಗಾ ಮೈದಾನ ಪೆಂಡಾಲ್‌ನಲ್ಲಿ ಚಿಕ್ಕ ಗಣೇಶ ಹಾಗೂ ಉತ್ಸವ ಮೂರ್ತಿ ಗಣೇಶ ಪ್ರತಿಷ್ಠಾಪನೆ ಮಾಡಲಾಗಿದೆ. ಉತ್ಸವ ಸಮಿತಿ ಅಧ್ಯಕ್ಷ ಸಂಜೀವ್ ಬಡೆಸ್ಕರ್ ನೇತೃತ್ವದಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಮಂತ್ರ ಘೋಷಣೆ ಮುಖಾಂತರ ಪೂಜೆ ಆರಂಭಿಸಲಾಗಿದ್ದು, ಪಾಲಿಕೆ ಸದಸನ ಸಮಿತಿ ಅಧ್ಯಕ್ಷ ಸಂತೋಷ ಚಹ್ವಾಣ್ ಸೇರಿ ಹಲವಾರು ಹಿಂದೂ ಸಂಘಟನೆ ಮುಖಂಡರು ಭಾಗಿಯಾಗಿದ್ದು, ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

31/08/2022 10:18 am

Cinque Terre

124.53 K

Cinque Terre

30

ಸಂಬಂಧಿತ ಸುದ್ದಿ