ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ನೀಡಲಾಗಿದೆ, ಮತ್ತೊಂದೆಡೆ ಹೈಕೋರ್ಟ್ ನಲ್ಲಿ ಈದ್ಗಾ ಗಣೇಶೋತ್ಸವ ಕುರಿತ ವಿಚಾರಣೆ ನಡೆಯುತ್ತಿದೆ.
ಇದರ ಮಧ್ಯೆ ಹುಬ್ಬಳ್ಳಿ ಈದ್ಗಾ ಮೈದಾನದ ಸುತ್ತ ಪೊಲೀಸ್ ಸರ್ಪಗಾವಲು ಜೊತೆ ಪ್ಯಾರಾ ಮಿಲಿಟರಿ ಪಡೆ ನಿಯೋಜನೆ ಮಾಡಲಾಗಿದೆ. ಈದ್ಗಾ ಮೈದಾನವನ್ನು ಎರಡು ಭಾಗವಾಗಿ ಇಬ್ಭಾಗ ಮಾಡಲಾಗಿದ್ದು ಗಣೇಶೋತ್ಸವ ಮಾಡಲು ನಿಗದಿಪಡಿಸಿದ ಸ್ಥಳವನ್ನು ಪ್ರತ್ಯೇಕಿಸಿ ಬ್ಯಾರಿಕೇಡ್ ಹಾಕಲಾಗಿದೆ.
ಈದ್ಗಾ ಆವರಣದ ಒಳಗೆ ಮತ್ತು ಈದ್ಗಾ ಆವರಣದ ಹೊರಗೆ ಎಸಿಪಿ ಮಟ್ಟದ ಅಧಿಕಾರಿಗಳಿಂದ ಭದ್ರತೆಯನ್ನು ಒದಗಿಸಲಾಗಿದೆ. ಈದ್ಗಾ ಮೈದಾನದ ಸುತ್ತ ಪೊಲೀಸ್ ಫುಲ್ ಅಲರ್ಟ್ ಆಗಿದೆ. ಇನ್ನು ಮೂರು ದಿನಗಳ ಕಾಲ ಮೈದಾನದಲ್ಲಿ ಗಣೇಶ ಉತ್ಸವಕ್ಕೆ ಅವಕಾಶ ನೀಡಿರುವುದನ್ನು ವಿರೋಧಿಸಿ ನ್ಯಾಯಾಲಯದ ಮೆಟ್ಟಿಲು ಏರಲಾಗಿದೆ. ಈ ಹಿನ್ನೆಲೆಯಲ್ಲಿ
ಮುನ್ನೆಚ್ಚರಿಕಾ ಕ್ರಮವಾಗಿ ಭದ್ರತೆ ಹೆಚ್ಚಿಸಲಾಗಿದ್ದು ಇಂದು ಮಧ್ಯಾಹ್ನ ನಡೆಯುವ ವಿಚಾರಣೆ ಮೇಲೆ ಎಲ್ಲರ ಕಣ್ಣು ನೆಟ್ಟಿದೆ..
Kshetra Samachara
30/08/2022 03:04 pm