ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಗಣೇಶ ಚತುರ್ಥಿ ನಿಮಿತ್ತ ಶಾಂತಿ ಸಭೆ

ಅಣ್ಣಿಗೇರಿ: ಗಣೇಶ ಚತುರ್ಥಿ ಹಿನ್ನೆಲೆ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಪಟ್ಟಣದ ಜನ ಸ್ನೇಹಿ ಪೊಲೀಸ್ ಠಾಣೆಯ ಆವರಣದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಶಾಂತಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

ಸಿಪಿಐ ಧೃವರಾಜ ಬಿ ಪಾಟೀಲ, ಪಿಎಸ್ಐ ಲಾಲಸಾಬ್ ಜೂಲಕಟ್ಟಿ, ಮತ್ತು ಸಿದ್ದಾರೂಢ ಆಲದಕಟ್ಟಿ ಅವರ ನೇತೃತ್ವದಲ್ಲಿ ನಡೆದ ಶಾಂತಿ ಸಭೆಯಲ್ಲಿ ಗಣೇಶ ಹಬ್ಬದಲ್ಲಿ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತೆ ಎಂಬುದರ ಸಮಗ್ರ ಮಾಹಿತಿಯನ್ನು ಒದಗಿಸಿದರು .

ಮುಖ್ಯವಾಗಿ ಪರಿಸರ ಸ್ನೇಹಿ ಗಣಪತಿ ಪ್ರತಿಷ್ಠಾಪನೆ ಹಾಗೂ ಹಸಿರು ಪಟಾಕಿ ಬಳಸತಕ್ಕದ್ದು. ಸಾರ್ವಜನಿಕ ಸಂಚಾರ ಹಾಗೂ ವಾಹನ ಸಂಚಾರಕ್ಕೆ ಅಡೆತಡೆ ಉಂಟಾಗದಂತೆ ಪೆಂಡಾಲ್ ಹಾಕಬೇಕು. ಕಡ್ಡಾಯವಾಗಿ ಪರವಾನಿಗೆ ಪಡೆದುಕೊಳ್ಳಬೇಕು. ಮೆರವಣಿಗೆ ಸಂದರ್ಭದಲ್ಲಿ ಡಿಜೆ ಬಳಸುವಂತಿಲ್ಲ.

ಗಣಪತಿ ಪೆಂಡಾಲ್‌ಗಳಲ್ಲಿ ಇಬ್ಬರು ಸ್ವಯಂ ಸೇವಕರು ಇರಲೇಬೇಕು. ಕುಡಿಯುವ ನೀರಿನಲ್ಲಿ ಗಣಪತಿ ವಿಸರ್ಜನೆ ಮಾಡಕೂಡದು.

ಪೆಂಡಾಲ್‌ಗಳಲ್ಲಿ ಜೂಜಾಟ ಆಡುವಂತಿಲ್ಲ. ಅಹಿತಕರ ಘಟನೆ ನಡೆದದ್ದೇ ಆದಲ್ಲಿ ಆಯೋಜಕರೇ ಹೊಣೆಗಾರರು. ಹಾಗೂ ಸೌಹಾರ್ದತೆಯಿಂದ ಹಬ್ಬ ಆಚರಿಸಬೇಕು ಎಂಬ ಹಲವು ನಿಯಮಗಳ ಪ್ರಕಾರ ಆಚರಿಸಬೇಕು ಎಂದು ತಿಳಿಸಲಾಯಿತು. ಈ ವೇಳೆ ಪಟ್ಟಣದ ಗಣ್ಯರಾದ ಷಣ್ಮುಖ ಗುರಿಕಾರ್, ಶಿವಯೋಗಿ ಸುರಕೋಡ್, ಭಗವಂತಪ್ಪ ಪುಟ್ಟಣ್ಣವರ, ನಿಂಗಪ್ಪ ಬಡಪ್ಪನವರ್, ರಾಘವೇಂದ್ರ ರಾಮಗಿರಿ ಸೇರಿದಂತೆ ಅನೇಕ ಹಿರಿಯರು, ಯುವಕರು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

27/08/2022 11:14 am

Cinque Terre

43.45 K

Cinque Terre

1

ಸಂಬಂಧಿತ ಸುದ್ದಿ