ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ‌: ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ಕೊಡದಿದ್ದರೆ ಆ.25ಕ್ಕೆ ಶೆಟ್ಟರ್ ಮನೆ ಮುಂದೆ ಪ್ರತಿಭಟನೆ

ಹುಬ್ಬಳ್ಳಿ‌: ಈದ್ಗಾ ಮೈದಾನ ಗಣೇಶ ಮೂರ್ತಿಪ್ರತಿಷ್ಠಾಪನೆ ವಿಚಾರದ ಹಿನ್ನೆಲೆಯಲ್ಲಿ, ಎರಡನೆ ಬಾರಿ ಮನವಿ ಸಲ್ಲಿಸಿ ಗಡುವು ಕೊಟ್ಟಿದ್ದೆವು. ಇವತ್ತು ಮತ್ತೆ ಮೂರನೇ ಬಾರಿ ಸಾರ್ವಜನಿಕರ ಸಹಿ ಸಂಗ್ರಹಿಸಿ ಆಯುಕ್ತರಿಗೆ ಮನವಿ ಸಲ್ಲಿಸಿದ್ದೇವೆ. ಆದ್ರೂ ಇವರು ನಮಗೆ ಅನುಮತಿ ನೀಡದಿದ್ದರೆ ಮುಂಬರುವ ದಿನಾಂಕ 25ರಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮನೆಮುಂದೆ ಪ್ರತಿಭಟನೆ ಮಾಡುತ್ತೆವೆಂದು ಗಣೇಶೋತ್ಸವ ಮಂಡಳಿಯ ಸಂಚಾಲಕ ಹನಮಂತಸಾ ನಿರಂಜನ ಹೇಳಿದರು.

ಇಂದು ಪಾಲಿಕೆಗೆ ಮುತ್ತಿಗೆ ಹಾಕಿದ ನಂತರ ಮಾತನಾಡಿದ ಅವರು, ಕೇವಲ ದುರ್ಗದ ಬೈಲ್‌ನಲ್ಲಿ ಮಾತ್ರ 1500ಕ್ಕೂ ಹೆಚ್ಚು ಸಹಿ ಸಂಗ್ರಹವಾಗಿವೆ.

ಆಗಸ್ಟ್ 25ರ ಒಳಗಾಗಿ ಪರವಾನಿಗೆ ಕೊಡುತ್ತಾರೆ ಎನ್ನುವ ಭರವಸೆ ಇದೆ. ಮುಸ್ಲಿಂ ಬಾಂಧವರು ಕೂಡ ಗಣಪತಿ ಪ್ರತಿಷ್ಟಾಪನೆಗೆ ಬೆಂಬಲ ಸೂಚಿಸಿದ್ದಾರೆ. ಕೆಲವು ರಾಜಕಾರಣಿಗಳಿಂದ ಪ್ರತಿಷ್ಠಾಪನೆಗೆ ಅಡ್ಡಿಯಾಗುತ್ತಿದೆ. ಹಂತ ಹಂತವಾಗಿ ಹೋರಾಟ ಮಾಡುತ್ತಿದ್ದೇವೆ. ಮೂರನೇ ಬಾರಿ ಮನವಿ ಕೊಟ್ಟು ಗಡುವು ನೀಡಿದ್ದೇವೆ ನಮ್ಮ ಜನ ಪ್ರತಿನಿಧಿಗಳು ಈ ಹೋರಾಟಕ್ಕೆ ಬೆಂಬಲ ಸೂಚಿಸುತ್ತಾರೆ ಎನ್ನುವ ಭರವಸೆ ಇದೆ ಎಂದರು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

22/08/2022 06:55 pm

Cinque Terre

97.02 K

Cinque Terre

2

ಸಂಬಂಧಿತ ಸುದ್ದಿ