ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೋಳಿ ಹಬ್ಬ: ಧಾರವಾಡ ಜಿಲ್ಲೆಯಲ್ಲಿ ಮದ್ಯಪಾನ, ಮದ್ಯ ಮಾರಾಟ ನಿಷೇಧ

ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಮಾರ್ಚ್ 17 ರಿಂದ 21ರವರೆಗೆ ವಿವಿಧ ತಾಲೂಕುಗಳ ವ್ಯಾಪ್ತಿಯಲ್ಲಿ ಮದ್ಯಪಾನ ಮತ್ತು ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ನಿತೀಶ್ ಪಾಟೀಲ ಆದೇಶ ಹೊರಡಿಸಿದ್ದಾರೆ.

ಮಾರ್ಚ್ 17ರಿಂದ 20ರವರೆಗೆ ಧಾರವಾಡ ಗ್ರಾಮೀಣ ತಾಲ್ಲೂಕು, ಹುಬ್ಬಳ್ಳಿ ಗ್ರಾಮೀಣ ತಾಲೂಕು, ನವಲಗುಂದ ತಾಲ್ಲೂಕು, ಅಣ್ಣಿಗೇರಿ ತಾಲ್ಲೂಕು, ಅಳ್ನಾವರ ತಾಲೂಕಿನ ಹುಲ್ಲಿಕೇರಿ, ಅರವಟಗಿ, ಕೋಗಿಲಗೇರಿ, ಡೋರಿ, ಬೆಣಚಿ, ಹೊನ್ನಾಪೂರ, ಕುಂಬಾರಗೊಪ್ಪ, ಕಂಬಾರಗಣವಿ, ಕಡಬಗಟ್ಟಿ, ಅಂಬೋಳಿ, ಚಂದ್ರಗಿರಿ ಜೈಭಾರತ ಕಾಲೋನಿ ಹಾಗೂ ಕಲಘಟಗಿ ತಾಲೂಕುಗಳಲ್ಲಿ, ಮಾರ್ಚ್ 15 ರಿಂದ 18 ರವರೆಗೆ ನವಲಗುಂದ ಪಟ್ಟಣ (ರಾಮಲಿಂಗ ಕಾಮಣ್ಣ), ಕಲಘಟಗಿ ತಾಲ್ಲೂಕಿನ ಗ್ರಾಮಗಳಾದ ಜಿ.ಬಸವನಕೊಪ್ಪ, ಜೋಡಳ್ಳಿ, ಹಿರೇಹೊನ್ನಳ್ಳಿ, ಧೂಳಿಕೊಪ್ಪ ಸಂಗಮೇಶ್ವರ, ದುಮ್ಮವಾಡ, ಕುಂದಗೋಳ ತಾಲೂಕಿನ ಗ್ರಾಮಗಳಾದ ಯರೇಬೂದಿಹಾಳ, ರಟ್ಟಿಗೇರಿ, ಹನುಮನಾಳ, ರಾಮಾಪೂರ, ಧಾರವಾಡ ತಾಲೂಕಿನ ಮುಳಮುತ್ತಲ ಗ್ರಾಮಗಳಲ್ಲಿ, ಮಾರ್ಚ್ 16 ರಿಂದ 19 ರವರೆಗೆ ಕುಂದುಗೋಳ ತಾಲೂಕು, ಅಳ್ನಾವರ ತಾಲೂಕು, ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಗ್ರಾಮಗಳಾದ ಸುಳ್ಳ ಮತ್ತು ಕಿರೇಸೂರು ಗ್ರಾಮಗಳಲ್ಲಿ. ಮಾರ್ಚ್ 19 ರಿಂದ 22 ರವರೆಗೆ ಕಲಘಟಗಿ ತಾಲೂಕಿನ ಮಿಶ್ರೀಕೋಟಿ ಗ್ರಾಮದಲ್ಲಿ ಮದ್ಯಪಾನ ಮತ್ತು ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.

ಈ ಸ್ಥಳಗಳಲ್ಲಿ ಭಾರತೀಯ ತಯಾರಿಕೆಯ ಮದ್ಯದ ಅಂಗಡಿಗಳು ಬೀಯರ್ ಬಾರ್‌ಗಳು ಕ್ಲಬ್‌ಗಳು ಮತ್ತು ಮದ್ಯದ ಡಿಪೋಗಳನ್ನು ಮುಚ್ಚತಕ್ಕದ್ದು, ಪರಿಸ್ಥಿತಿಗನುಗುಣವಾಗಿ ಅಬಕಾರಿ ಇನ್ಸ್‍ಪೆಕ್ಟರರು ಹಾಗೂ ಉಪ ವಿಭಾಗ ಅಬಕಾರಿ ಅಧೀಕ್ಷಕರು, ಅವಶ್ಯಕತೆ ಕಂಡುಬಂದಲ್ಲಿ ಶಾಂತಿ ಪಾಲನೆಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

17/03/2022 07:47 pm

Cinque Terre

24.36 K

Cinque Terre

0

ಸಂಬಂಧಿತ ಸುದ್ದಿ