ರಂಗಪಂಚಮಿ ಹಬ್ಬದ ಪ್ರಯುಕ್ತವಾಗಿ ಹುಬ್ಬಳ್ಳಿ ಆಯಕಟ್ಟಿನ ಪ್ರದೇಶಗಳಲ್ಲಿ ಬಿಗಿಯಾದ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಶಾಂತಿಯುತ ಹೋಳಿ ಆಚರಣೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿರುವ ಪೊಲೀಸ್ ಇಲಾಖೆ ಚೆನ್ನಮ್ಮ ವೃತ್ತದಲ್ಲಿ ಬೀಡು ಬಿಟ್ಟಿದೆ.
ಈಗಾಗಲೇ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ವಾಹನ ಹಾಗೂ ಸಿಬ್ಬಂದಿ, ಕ್ಷಿಪ್ರ ಕಾರ್ಯಾಚರಣೆ ಪಡೆ ಸಿಬ್ಬಂದಿ, ಕೆ.ಎಸ್.ಆರ್.ಪಿ ತುಕಡಿ ಸೇರಿದಂತೆ ಸಾಕಷ್ಟು ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಸಾರ್ವಜನಿಕರ ಓಡಾಟ ಸಂಪೂರ್ಣ ತಗ್ಗಿದ್ದು, ಬೆರಳು ಎಣಿಕೆಯಷ್ಟು ವಾಹನಗಳು ಓಡಾಡುತ್ತಿದ್ದು, ದಿನವೂ ಜನ ಜಂಗುಳಿಯಿಂದ ತುಂಬಿರುತ್ತಿದ್ದ ವಾಣಿಜ್ಯನಗರಿ ಬಹುತೇಕ ಸ್ತಬ್ಧವಾಗಿದೆ.
ಹುಬ್ಬಳ್ಳಿಯ ವಿವಿಧ ನಗರದಲ್ಲಿ ರಂಗಪಂಚಮಿ ರಂಗು ಬಲು ಜೋರಾಗಿದೆ. ಕೊರೊನಾ ಕರಿನೆರಳಿನ ನಂತರ ಹೋಳಿ ಆಚರಣೆಗೆ ಕಳೆ ಬಂದಂತಾಗಿದೆ.
Kshetra Samachara
22/03/2022 11:33 am