ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ: ಮಧ್ಯರಾತ್ರಿ ಕಳ್ಳರ ಕೈಚಳಕ: ಪಂಪ್, ಮೋಟರ್ ಗಳು ಗಾಯಬ್

ತಾಲೂಕಿನ ಅರವಟಗಿ ಗ್ರಾಮದಲ್ಲಿ ಸುಮಾರು ಒಂದು ಲಕ್ಷ ಬೆಲೆ ಬಾಳುವ ಮೋಟರ್,ಪಂಪ್ ಗಳು ಕಳುವು ಆದ ಘಟನೆ ಕಳೆದ ರವಿವಾರ ದಿನಾಂಕ 13-3-2022 ರಂದು ನಡೆದಿದೆ.

ಚಂದ್ರಶೇಖರ ಕಲ್ಲಪ್ಪ ಅಮ್ಮನಗಿ ಎನ್ನುವವರ ಗ್ಯಾರೇಜ್ ನಲ್ಲಿಯೇ ಪಂಪ್ ಹಾಗೂ ಮೋಟರ್ ಕಳುವು ಆಗಿವೆ.ಸುಮಾರು ಆರು ವರ್ಷಗಳಿಂದ ಅರವಟಗಿ ಗ್ರಾಮದಲ್ಲಿ ಯಂತ್ರೋಪಕರಣಗಳ ರಿಪೇರಿ ಮಾಡುವ ಗ್ಯಾರೇಜ್ ಇಟ್ಟುಕೊಂಡಿದ್ದಾರೆ. ಕಳೆದ ರವಿವಾರ ಎಂದಿನಂತೆ ರಾತ್ರಿ ಸುಮಾರು ಒಂದು ಘಂಟೆ ವರೆಗೆ ಕೆಲಸ ಮಾಡಿ ಗ್ಯಾರೇಜ್ ಬಂದ್ ಮಾಡಿಕೊಂಡು ಮಲಗಿದ್ದಾರೆ,ಬೆಳಿಗ್ಗೆ ಎದ್ದು ನೋಡಿದಾಗ ಬಾಗಿಲಲ್ಲಿ ಇದ್ದ ಏಳು ಮೋಟರ್ ಹಾಗೂ ಹತ್ತು ಪಂಪ ಗಳು ಕಾಣೆಯಾಗಿದ್ದು ಗೊತ್ತಾಗಿದೆ.ಅದೇ ದಿನ ಅಂದ್ರೆ ಸೋಮವಾರ ಅಳ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇಲ್ಲಿ ಬೇಸರ ಸಂಗತಿ ಏನೆಂದರೆ ದೂರು ದಾಖಲಿಸಿದ ಎಂಟು ದಿನಗಳ ನಂತರ ಅಳ್ನಾವರ ಪೊಲೀಸ್ ಠಾಣೆಯ ಪಿ,ಎಸ್,ಐ ಎಸ್,ಆರ್,ಕಣವಿ ಸ್ಥಳ ಪರಿಶೀಲನೆ ಹಾಗೂ ಪಂಚನಾಮಿ ಮಾಡಲು ಬಂದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕಳ್ಳ ಕಾಕರ ಹಾವಳಿ ಹೆಚ್ಚಾಗಿದೆ.ಅರವಟಗಿ ಯಲ್ಲಿ ಕಳು ಆದ ಮಾರನೇ ದಿನ ರಾತ್ರಿ ಅಂಬೋಳ್ಳಿ ಎಲ್ಲಿಯೂ ಮದ್ಯ ರಾತ್ರಿ ಬೈಕ್ ಕಳ್ಳತನ ಮಾಡಲು ಕಳ್ಳರು ಯತ್ನ ನಡೆಸಿದ್ದಾರೆ. ಜನರು ಎಚ್ಚರ ವಾಗುತ್ತಿದ್ದಂತೆ ಕಳ್ಳರು ಅಲ್ಲಿಂದ ಪರಾರಿ ಯಾಗಿದ್ದಾರೆ.ಕಳ್ಳರ ಹೆಡೆಮುರಿ ಕಟ್ಟಲು ಪೊಲೀಸರು ಪ್ರಯತ್ನ ಮಾಡಿದರೆ ಮಾತ್ರ ಇಂತಹ ಕಳ್ಳತನದ ಕೇಸ್ ಗಳು ಕಡಿಮೆಯಾಗಲು ಸಾಧ್ಯ.

Edited By :
Kshetra Samachara

Kshetra Samachara

23/03/2022 01:22 pm

Cinque Terre

23.54 K

Cinque Terre

0

ಸಂಬಂಧಿತ ಸುದ್ದಿ