ಹುಬ್ಬಳ್ಳಿ: ಹುಬ್ಬಳ್ಳಿಯ ಐತಿಹಾಸಿಕ ಉಣಕಲ್ಲ ಕೆರೆಗೆ ಚನ್ನಬಸವ ಸಾಗರ'ವೆಂದು ನಾಮಕರಣ ಮಾಡಬೇಕು ಎಂದು ಮಹಾನಗರ ಪಾಲಿಕೆಗೆ ಹೈಕೋರ್ಟ್ ಆದೇಶ ನೀಡಿದೆ .
2003ರ ಜನವರಿ 16 ರಂದು ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈ ಕುರಿತು ನಿರ್ಣಯ ಅಂಗೀಕರಿಸಿದ್ದರೂ. ನಿರ್ಣಯ ಜಾರಿಗೆ ಕ್ರಮ ಕೈಗೊಳ್ಳದ ಪಾಲಿಕೆ ವಿರುದ್ಧ ಹಲವರು ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ಧಾರವಾಡ ಹೈಕೋರ್ಟ್ ಪೀಠ ಈ ಆದೇಶ ನೀಡಿದೆ ಹುಬ್ಬಳ್ಳಿ- ಧಾರವಾಡ ಮಧ್ಯದ ಪ್ರಮುಖ ಆಕರ್ಷಣೆಯಾಗಿರುವ ಮತ್ತು ಶತಮಾನಗಳ ಇತಿಹಾಸ ಹೊಂದಿರುವ ಉಣಕಲ್ಲ ಕೆರೆ ಹಾಗೂ ಆವರಣವನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿ ಪಡಿಸಲಾಗಿದೆ.
ಕೆರೆ ದಂಡೆಯ ಮೇಲಿರುವ ಶ್ರೀ ಚನ್ನಬಸವೇಶ್ವರ ದೇವಸ್ಥಾನಕ್ಕೆ ಸಾವಿರಾರು ಭಕ್ತರು ನಡೆದುಕೊಳ್ಳುತ್ತಾರೆ . ಪ್ರತಿ ವರ್ಷ ಭಾರತ ಹುಣ್ಣಿಮೆಯಂದು ಜಾತ್ರೆ, ರಥೋತ್ಸವ ನಡೆಯುತ್ತದೆ. ಶ್ರಾವಣ ಮಾಸದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ , ಭಕ್ತಿಯಿಂದ ನಡೆಯುತ್ತವೆ. 12 ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿ ನಡೆದ ನಂತರ ಶ್ರೀ ಚನ್ನಬಸವೇಶ್ವರರ ನೇತೃತ್ವದ ಶರಣರ ತಂಡ ಸಹ್ಯಾದ್ರಿಯ ಅರಣ್ಯ ಪ್ರದೇಶದ ಮಧ್ಯದ ಉಳವಿಯತ್ತ ಸಾಗಿತು. ಈ ಮಧ್ಯೆ ಅವರು ಉಣಕಲ್ಲ ಕೆರೆ ದಂಡೆ ಮೇಲೆ ಕೆಲಕಾಲ ಉಳಿದು ಜನರಲ್ಲಿ ಜಾಗೃತಿ ಮೂಡಿಸಿದರು. ಈ ಹಿನ್ನೆಲೆಯಲ್ಲಿ ಉಣಕಲ್ಲ ಕೆರೆ ದಂಡೆಯ ಮೇಲೆ ರೂಪಗೊಂಡಿರುವ ದೇವಸ್ಥಾನ ಬಸವ ಭಕ್ತರ ಪವಿತ್ರ ಯಾತ್ರಾ ಸ್ಥಳವಾಗಿದೆ .
ಈ ಎಲ್ಲ ಕಾರಣಗಳಿಂದ ಚನ್ನಬಸವ ಸಾಗರ ಎಂದು ನಾಮಕರಣ ಮಾಡಲು ಹಿಂದೆ ನಿರ್ಣಯ ಕೈಗೊಳ್ಳಲಾಗಿತ್ತು. ಹುಬ್ಬಳ್ಳಿಯ ಶಂಕ್ರಗೌಡ ಪಾಟೀಲ , ವಿನಯ ಪರಮಾದಿ, ಶಿವಪ್ಪ ಪಟ್ಟಣಶೆಟ್ಟಿ ಅವರು ಸೇರಿ 7 ಜನರು ನ್ಯಾಯಾಲಯದ ಮೊರೆ ಹೋಗಿ ವಾದ ಮಂಡಿಸಿದ್ದರು. ಆದರೆ ನಿರ್ಣಯ ಜಾರಿಯಾಗದ ಹಿನ್ನೆಲೆಯಲ್ಲಿ ಇವರ ಪರವಾಗಿ ವಕೀಲ ಕೆ.ಎಸ್ , ಕೋರಿಶೆಟ್ಟರ್ ವಾದ ಮಂಡಿಸಿದ್ದರು.
Kshetra Samachara
18/08/2021 02:47 pm