ಕುಂದಗೋಳ: ತಾಲೂಕಿನ ಮೆತ್ತಿಗಟ್ಟಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಅವರಣದಲ್ಲಿ ಕುಂದಗೋಳ ವಲಯ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಬೀಜ ಬಿತ್ತನೆ ಅಭಿಯಾನ ಹಮ್ಮಿಕೊಳ್ಳಲಾಯಿತು.
ವಲಯ ಅರಣ್ಯಾಧಿಕಾರಿ ರಜಾಕಸಾಬ್ ಅವರ ನೇತೃತ್ವದಲ್ಲಿ "ಬೀಜ ಬಿತ್ತನೆ ನಮ್ಮ ಉತ್ತಮ ಭವಿಷ್ಯಕ್ಕಾಗಿ" ಎಂಬ ಘೋಷ ವಾಕ್ಯದಡಿ ಅಜಾದಿ ಕಾ ಅಮೃತ ಮಹೋತ್ಸವ ಹಾಗೂ ಹಸಿರು ಕರ್ನಾಟಕ ಅಂಗವಾಗಿ ಬೀಜ ಬಿತ್ತನೆ ಅಭಿಯಾನ ಕೈಗೊಂಡು ಬೀಜ ಬಿತ್ತಿ ಸಸಿಗಳನ್ನು ನೆಡಲಾಯಿತು.
ಈ ವೇಳೆ ಸ್ಕೌಟ್ ಗೈಡ್ಸ್ ವಿದ್ಯಾರ್ಥಿಗಳಿಗೆ ವಲಯ ಅರಣ್ಯಾಧಿಕಾರಿ ರಜಾಕಸಾಬ್ ಪರಿಸರದ ಅರಿವು ಮೂಡಿಸಿದರು. ವಿದ್ಯಾರ್ಥಿಗಳು ಉತ್ಸಾಹದಿಂದ ಸಸಿನೆಟ್ಟು ಸಂಭ್ರಮಿಸಿದರು.ಈ ಸಂಭ್ರಮದಲ್ಲಿ ಸರ್ವ ವಲಯ ಅರಣ್ಯಾಧಿಕಾರಿ ವರ್ಗದವರು ಹಾಗೂ ಮೊರಾರ್ಜಿ ದೇಸಾಯಿ ಶಾಲಾ ಶಿಕ್ಷಕರು ಆಡಳಿತ ಮಂಡಳಿ ಉಪಸ್ಥಿತರಿದ್ದರು.
Kshetra Samachara
08/06/2022 09:55 pm