ಧಾರವಾಡ: ಉತ್ತರ ಕರ್ನಾಟಕ ಭಾಗದ ಪ್ರಮುಖ ಯೋಜನೆಯಾದ ಕಳಸಾ, ಬಂಡೂರಿ ಹಾಗೂ ಮಹಾದಾಯಿ ಹೋರಾಟಕ್ಕೆ ಸಂಬಂಧಿಸಿದಂತೆ ಕ್ಲೇಮ್ ಕಮೀಷನ್ ಧಾರವಾಡದಲ್ಲಿ ಸ್ಥಾಪನೆ ಮಾಡಲು ಸರ್ಕಾರ ತೀರ್ಮಾನಿಸಿದೆ.
ಈ ಕಮೀಷನ್ ಸ್ಥಾಪನೆ ಮಾಡಲು ಧಾರವಾಡದಲ್ಲಿ ಜಾಗ ಗುರುತಿಸುವ ಜವಾಬ್ದಾರಿಯನ್ನು ಜಿಲ್ಲಾಡಳಿತ ಪೊಲೀಸ್ ಇಲಾಖೆಗೆ ನೀಡಿದೆ.
ಗುರುವಾರ ಪೊಲೀಸ್ ಆಯುಕ್ತ ಆರ್. ದಿಲೀಪ್ ಅವರು ಧಾರವಾಡಕ್ಕೆ ಬಂದು ಮೂರ್ನಾಲ್ಕು ಕಡೆಗಳಲ್ಲಿ ಕಮೀಷನ್ ಸ್ಥಾಪನೆಗಾಗಿ ಜಾಗ ವೀಕ್ಷಣೆ ಮಾಡಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯದ ಎರಡು ಕಡೆಗಳಲ್ಲಿ ಹಾಗೂ ಆಲೂರು ವೆಂಕಟರಾವ್ ಸಭಾಭವನದ ಎದುರಿಗಿನ ಜಾಗವನ್ನು ಕ್ಲೇಮ್ ಕಮೀಷನ್ ಸ್ಥಾಪನೆಗಾಗಿ ಗುರುತು ಮಾಡಲಾಗಿದೆ.
ಕ್ಲೇಮ್ ಕಮೀಷನ್ ನ್ಯಾಯಾಲಯದ ಮಾದರಿಯಲ್ಲಿ ನಡೆಯಲಿದ್ದು, ಮಹಾದಾಯಿ ಸಂಬಂಧದ ಹೋರಾಟ, ಆಸ್ತಿ, ಪಾಸ್ತಿ ಹಾನಿ ಹಾಗೂ ಮಹಾದಾಯಿ ಸಂಬಂಧ ಇರುವ ಸಮಸ್ಯೆಗಳು ಇಲ್ಲಿ ವಿಚಾರಣೆಗೊಳಪಡಲಿವೆ. ಈ ಕ್ಲೇಮ್ ಕಮೀಷನ್ 6 ಜಿಲ್ಲೆಗಳಿಗೆ ಒಳಪಡಲಿದೆ.
Kshetra Samachara
24/09/2020 01:01 pm