ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಆಸ್ಪತ್ರೆಯ ಆವರಣವೊ ಅಥವಾ ಡೆಂಘಿ ಮಲೇರಿಯಾ ತಾಣವೊ?

ಅಣ್ಣಿಗೇರಿ: ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಅವರಣದಲ್ಲಿ ಮಳೆಯಿಂದಾಗಿ ನೀರು ನಿಂತುಕೊಂಡು ರೋಗವನ್ನು ಆಹ್ವಾನ ಮಾಡುತ್ತಿದೆ.

ಪ್ರತಿದಿನ ಅಲ್ಲಿನ ವೈದ್ಯಾಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳು ಮಲೇರಿಯಾ ಹರಡುವ ಬಗ್ಗೆ ಮನೆ ಮನೆಗೆ ತೆರಳಿ ರೋಗಗಳು ಯಾವ ರೀತಿ ಹರಡುತ್ತದೆ ಎಂಬುದನ್ನು ತಿಳುವಳಿಕೆ ಹೇಳಿ ಬರುತ್ತಾರೆ. ಆದ್ರೆ ಆಸ್ಪತ್ರೆ ಆವರಣದಲ್ಲಿಯೇ ನೀರು ನಿಂತುಕೊಂಡಿದ್ದು, ಇವರಿಗೆ ಯಾರು ತಿಳುವಳಿಕೆ ಹೇಳುತ್ತಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

ನಿತ್ಯ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ನೂರಾರು ರೋಗಿಗಳು ಬಂದು ಚಿಕಿತ್ಸೆ ಪಡೆದುಕೊಳ್ಳುತ್ತಾರೆ.ಈ ನಿಂತ ನೀರು ಮಲೇರಿಯಾ,ಡೆಂಘಿಯಂತಹ ಭಯಾನಕ ರೋಗಗಳನ್ನು ಹರಡುತ್ತವೆ ಎಂಬ ಭಯದಲ್ಲಿಯೇ ಬರುವಂತಾಗಿದೆ.

Edited By : Somashekar
Kshetra Samachara

Kshetra Samachara

14/05/2022 01:44 pm

Cinque Terre

46.31 K

Cinque Terre

1

ಸಂಬಂಧಿತ ಸುದ್ದಿ