ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಬೇಡಿಕೆ ಈಡೇರಿಕೆಗಾಗಿ ಸಹಿ ಸಂಗ್ರಹ ದೆಹಲಿ ಚಲೋ ಕಾರ್ಯಕ್ರಮ

ಕುಂದಗೋಳ: ಇತ್ತೀಚೆಗೆ ತಮ್ಮ ವಿವಿಧ ಬೇಡಿಕೆ ಈಡೇರಿಕೆಗಾಗಿ ಕುಂದಗೋಳ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದ ಜಿಲ್ಲಾ ಗ್ರಾಮೀಣ ಕೂಲಿ ಕಾರ್ಮಿಕರ ಸಂಘದವರು ಇದೀಗ ಸಹಿ ಅಭಿಯಾನ ಆರಂಭಿಸಿದ್ದಾರೆ.

ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಕೂಲಿ ಸೇರಿದಂತೆ ವಿವಿಧ ಕೂಲಿಗಳಿಗೆ ವೇತನ, ಕೂಲಿ ಕಾರ್ಮಿಕರಿಗೆ ಗೌರವ ಸೇರಿದಂತೆ ವಿವಿಧ ಬೇಡಿಕೆ ಹೊತ್ತ ಗ್ರಾಮೀಣ ಕೂಲಿ ಕಾರ್ಮಿಕರು ಹಳ್ಳಿ ಹಳ್ಳಿಗಳಲ್ಲಿ ಕೂಲಿ ಕಾರ್ಮಿಕರಿಂದ ಬಟ್ಟೆ ಮೇಲೆ ಸಹಿ ಪಡೆದು ತಮ್ಮ ಧರಣಿಗೆ ಸಹಿ ಅಭಿಯಾನದ ಮೂಲಕ ದೆಹಲಿ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಈಗಾಗಲೇ ಕುಂದಗೋಳ ತಾಲೂಕಿನ ಹಳ್ಳಿಗಳಲ್ಲಿ ಕೂಲಿಕಾರರ ಸಹಿ ಪಡೆಯುತ್ತಿರುವ ಕೂಲಿ ಕಾರ್ಮಿಕರ ಸಂಘಟನೆ ದೆಹಲಿಗೆ ಪ್ರಯಾಣ ಬೆಳೆಸಿ ಪ್ರಧಾನಮಂತ್ರಿಯವರ ಗಮನಕ್ಕೆ ತಮ್ಮ ಸಮಸ್ಯೆ ತರಲು ಮುಂದಾಗಿದ್ದಾರೆ.

Edited By : Somashekar
Kshetra Samachara

Kshetra Samachara

11/07/2022 12:37 pm

Cinque Terre

33.57 K

Cinque Terre

0

ಸಂಬಂಧಿತ ಸುದ್ದಿ