ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ತೋಳಗಳ ಭೀಕರ ದಾಳಿ; 15ಕ್ಕೂ ಹೆಚ್ಚು ಮೇಕೆ-ಕುರಿ ಮರಿ ಬಲಿ

ಕುಂದಗೋಳ: ತೋಳಗಳ ಅಟ್ಟಹಾಸಕ್ಕೆ ಮೇಕೆ ಹಾಗೂ ಕುರಿ ಮರಿಗಳು ಪ್ರಾಣ ತೆತ್ತ ಘಟನೆ ಕುಂದಗೋಳ ತಾಲೂಕಿನ ಚಾಕಲಬ್ಬಿ ಗ್ರಾಮದ ಹೊರವಲಯದಲ್ಲಿ ಇಂದು ನಡೆದಿದೆ.

ಚಾಕಲಬ್ಬಿ ಗ್ರಾಮದ ಶಿವಾನಂದ ಭಾಗಣ್ಣನವರ ಎಂಬ ಕುರಿಗಾಹಿ ಅದೇ ಗ್ರಾಮದ ಓಂಕಾರಿಗೌಡ ಪಾಟೀಲ್ ಎಂಬುವವರ ಹೊಲದಲ್ಲಿ ದೊಡ್ಡಿ ಹಾಕಿಕೊಂಡು ಕುರಿ- ಮೇಕೆಗಳ ಸಮೇತ ವಾಸವಿದ್ದಾರೆ.

ಇಂದು ಮಧ್ಯಾಹ್ನ ದೊಡ್ಡಿ ಮೇಲೆ ದಾಳಿ ನಡೆಸಿದ ತೋಳ 15ಕ್ಕೂ ಹೆಚ್ಚು ಮೇಕೆ ಹಾಗೂ ಕುರಿ ಮರಿಗಳನ್ನು ಕೊಂದು ಹಾಕಿ, ಕೆಲ ಮರಿಗಳನ್ನು ಹೊತ್ತೊಯ್ದಿದೆ.

ಕುಟುಂಬಸ್ಥರು ದೊಡ್ಡಿ ಕಡೆಗೆ ಸಂಜೆ ಧಾವಿಸಿ ಬಂದು ನೋಡಿದಾಗ ಕುರಿ ಹಾಗೂ ಮೇಕೆ ಮರಿಗಳು ಸಾವನ್ನಪ್ಪಿರುವುದು ಕಂಡು ಬಂದಿದೆ. ತಕ್ಷಣ ಸ್ಥಳೀಯರು ಕುಂದಗೋಳ ಗ್ರಾಮೀಣ ಠಾಣೆಗೆ ವಿಷಯ ತಿಳಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

Edited By : Somashekar
Kshetra Samachara

Kshetra Samachara

10/07/2022 10:12 pm

Cinque Terre

101.38 K

Cinque Terre

1

ಸಂಬಂಧಿತ ಸುದ್ದಿ